×
Ad

ಮಂಕಿ ಪಾಕ್ಸ್ ಸೋಂಕು; ಮಂಗಳೂರು ವಿಮಾನ‌ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ನಿಗಾ

Update: 2022-07-19 10:40 IST

ಮಂಗಳೂರು: ಮಂಕಿ ಪಾಕ್ಸ್ ಸೋಂಕು ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ನೀಡಿದ ಸೂಚನೆ ಪ್ರಕಾರ ವಿಮಾನ ನಿಲ್ದಾಣವು ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ತನ್ನ ಸ್ಕ್ರೀನಿಂಗ್ ಕಾರ್ಯ ವಿಧಾನಗಳನ್ನು ಬಲಪಡಿಸಿದೆ.

ಮಂಕಿ ಪಾಕ್ಸ್ ಪತ್ತೆಯಾಗಿರುವ ಸ್ಥಳೀಯ ವಲಯಗಳಿಗೆ ಪ್ರಯಾಣಿಸಿರುವ ಪ್ರಯಾಣಿಕರ ಮೇಲೆ ಮತ್ತು ಮಂಕಿ ಪಾಕ್ಸ್ ಪತ್ತೆಯಾಗಿರುವ ಪ್ರದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ.

ಸೋಂಕು ಪತ್ತೆ ಹಚ್ಚಲು ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ಅನ್ನು ಮುಂದುವರಿಸಲಾಗಿದೆ. ವಿಮಾನ ನಿಲ್ದಾಣವು ಮಂಕಿ ಪಾಕ್ಸ್‌ಗೆ ಸಂಬಂಧಿಸಿದ ಎಲ್ಲಾ ಸಹಭಾಗಿಗಳಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ‌ ನಿಲ್ದಾಣದ ಪ್ರಕಟನೆ‌ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News