×
Ad

ಉಳ್ಳಾಲ: ಕಡಲ್ಕೊರೆತ ತೀವ್ರಗೊಂಡ ಬಟ್ಟಂಪಾಡಿಗೆ ಬಿಕೆ ಹರಿಪ್ರಸಾದ್, ಯುಟಿ ಖಾದರ್ ಭೇಟಿ

Update: 2022-07-19 22:51 IST

ಉಳ್ಳಾಲ: ಕಡಲ್ಕೊರೆತ ತೀವ್ರ ಗೊಂಡ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬಟ್ಟಂಪಾಡಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್  ಕ್ಷೇತ್ರದ ಶಾಸಕ, ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿ ಕಡಲ್ಕೋರೆತ ತೀವ್ರ ಮಟ್ಟದ ಪರಿಣಾಮ ಬೀರಿದೆ. ಮಳೆ, ಪ್ರವಾಹ ಮತ್ತು ನೆರೆ ಕರಾವಳಿ ಪ್ರದೇಶಕ್ಕೆ ಹೊಸ ವಿಚಾರಗಳೇನಲ್ಲ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಜನರನ್ನು ಅವರ ಪಾಡಿಗೆ ಬಿಟ್ಟು ಇಂತಹ ಸಮಸ್ಯೆ ಸೃಷ್ಟಿ ಮಾಡಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಡೆಗೋಡೆ ಸಹಿತ ಹಲವು ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಕಡಲ್ಕೊರೆತ ಆಗದಂತೆ ಕ್ರಮ ಕೈಗೊಳ್ಳುತ್ತಿತ್ತು. ಈಗ ಕೇವಲ ತಡೆಗೋಡೆ ನಿರ್ಮಾಣ ಮಾತ್ರ ಸಾಕಾಗುವುದಿಲ್ಲ. ಪ್ರತಿವರ್ಷ ನಿರ್ವಹಣೆ ಕೂಡಾ ಮುಖ್ಯ. ಆದರೆ ಸರ್ಕಾರ ಕೆ ಈ ರೀತಿ ಕೆಲಸ ಮಾಡಲು ಪುರುಸೊತ್ತು ಇಲ್ಲ ಎಂದು ಆರೋಪಿಸಿದ ಅವರು ಕಡಲ್ಕೊರೆತ ದಿಂದ ಮನೆ ಕಳಕೊಂಡ ಕುಟುಂಬ ಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕೇವಲ ಬೆಂಗಳೂರು ನಲ್ಲಿ ಕುಳಿತು ಕೊಂಡವರಿಗೆ ಕಾಂಗ್ರೆಸ್ ಪಕ್ಷ 60 ವರ್ಷ ಏನು ಕಾರ್ಯಕ್ರಮ ಮಾಡಿದೆ ಎಂದು ಗೊತ್ತಾಗಲು ಹೇಗೆ ಸಾಧ್ಯ? ಜವಾಬ್ದಾರಿ ಯುತವಾಗಿ ಕೆಲಸ ಮಾಡಬೇಕಾದವರು ಬೇಜವಾಬ್ದಾರಿ ತನದಿಂದ ಕಾರ್ಯ ನಿರ್ವಹಿಸಿ ದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಮರಳು ಮಾಫಿಯಾ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಪಾದಿಸಿದರು.

ಶಾಸಕ ಯುಟಿ ಖಾದರ್ ಮಾತನಾಡಿ ಕರಾವಳಿ ಭಾಗದ ಸಮಸ್ಯೆ ಬಗ್ಗೆ ಸ್ಪಷ್ಟ ವಾಗಿ ಬರೆದು ಸರ್ಕಾರದ ಗಮನ ಹರಿಸಲಾಗಿದೆ. ಜನರ ಸಮಸ್ಯೆ ಏನಿದೆಯೋ ಅದನ್ನು ಕೂಡಾ ಕಳೆದ ಒಂದು ವರ್ಷದಿಂದ ಲಿಖಿತ ರೂಪದಲ್ಲಿ ಸರ್ಕಾರಕ್ಕೆ ತಿಳಿಸಿದ್ದೇನೆ, ಸರ್ಕಾರ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಪರಿಶೀಲನೆ, ನಿರ್ವಹಣೆ ಎರಡೂ ಆಗಬೇಕು.ಕಾಮಗಾರಿ ಸರಿಯಾಗದಿದ್ದರೆ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ  ಎಂದರು.

ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಹಮ್ಮದ್ ಮುಕಚೇರಿ, ಉಳ್ಳಾಲ ನಗರ ಸಭೆ ಅಧ್ಯಕ್ಷ ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಬಾಜಿಲ್ ಡಿ ಸೋಜ, ದೀಪಕ್ ಪಿಲಾರ್, ಸುರೇಶ್ ಭಟ್ನಗರ್, ದೇವಕಿ ಉಳ್ಳಾಲ, ಮೋನು ಮಲಾರ್, ಸೋಮೇಶ್ವರ ಪುರಸಭೆ ಗ್ರಾಮಕರಣಿಕ ಲಾವಣ್ಯ, ಉಳ್ಳಾಲ ಗ್ರಾಮಕರಣಿಕ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News