ಉಡುಪಿ: 14ಕ್ಕೇರಿದ ಕೋವಿಡ್ ಪಾಸಿಟಿವ್
Update: 2022-07-21 19:20 IST
ಉಡುಪಿ: ಗುರುವಾರ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ ೧೪ಕ್ಕೇರಿದೆ. ದಿನದಲ್ಲಿ ನಾಲ್ವರು ಸೋಂಕಿನಿಂದ ಚೇತರಿಸಿ ಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಒಟ್ಟು ೩೨ ಮಂದಿ ಕೋವಿಡ್ ಸೋಂಕಿಗಾಗಿ ಚಿಕಿತ್ಸೆಯಲ್ಲಿದ್ದಾರೆ.
ಇಂದು ಪರೀಕ್ಷೆಗೊಳಗಾದ ೪೮೦ ಮಂದಿಯಲ್ಲಿ ಸೋಂಕು ಕಂಡುಬಂದ ೧೪ ಮಂದಿಯಲ್ಲಿ ನಾಲ್ವರು ಪುರುಷರಾ ದರೆ ಉಳಿದ ೧೦ ಮಂದಿ ಮಹಿಳೆಯರು. ಇವರಲ್ಲಿ ಒಂಭತ್ತು ಉಡುಪಿ ತಾಲೂಕಿನವರಾದರೆ ನಾಲ್ವರು ಕುಂದಾಪುರ ಹಾಗೂ ಒಬ್ಬರು ಕಾರ್ಕಳ ತಾಲೂಕಿನವರು. ಇವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ.
ಇಂದು ಉಡುಪಿ ತಾಲೂಕಿನ ೧೧೧, ಕುಂದಾಪುರ ತಾಲೂಕಿನ ೩೧೩ ಹಾಗೂ ಕಾರ್ಕಳ ತಾಲೂಕಿನ ೫೬ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು ಜಿಲ್ಲೆಯಲ್ಲಿ ಇಂದು ೧೭ ಮಂದಿಗೆ ಮೊದಲ ಡೋಸ್, ೨೧ ಮಂದಿಗೆ ಎರಡನೇ ಡೋಸ್ ಹಾಗೂ ೨೪೯೪ ಮಂದಿಗೆ ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.