×
Ad

ಬೆಂಗಳೂರು: ಒಂದೇ ದಿನದಲ್ಲಿ ಪೊಲೀಸ್ ಠಾಣಾಧಿಕಾರಿಗಳಾದ ಇಬ್ಬರು ಬಾಲಕರು

Update: 2022-07-21 21:45 IST
photo credit- twitter@DCPSEBCP

ಬೆಂಗಳೂರು, ಜು.21: ಮಾರಣಾಂತಿಕ ಕಾಯಿಲೆಗಳಿಂದಾಗಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ಇಬ್ಬರು ಬಾಲಕರ ಇಚ್ಛೆಯಂತೆ ಒಂದು ದಿನ ಅವರಿಗೆ ಪೊಲೀಸ್ ಠಾಣಾಧಿಕಾರಿ ಆಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.

ಮಿಥಿಲೇಶ್ ಹಾಗೂ ಮುಹಮ್ಮದ್ ಸಲ್ಮಾನ್ ಎಂಬ ಇಬ್ಬರು ಬಾಲಕರು ಮಾರಣಾಂತಿಕ ವ್ಯಾಧಿಗಳಿಂದಾಗಿ ಕಿದ್ವಾಯಿ ಹಾಗೂ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.

ಹಾಗಾಗಿ, ಇಲ್ಲಿನ ಆಗ್ನೇಯ ವಿಭಾಗದ ಪೊಲೀಸರು ಬಾಲಕರ ಆಸೆಯನ್ನು ಈಡೇರಿಸಿದರು. ಬಾಲಕರಿಬ್ಬರ ಬಗ್ಗೆ ಮೇಕ್ ಎ ವಿಶ್ ಫೌಂಡೇಶನ್ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಅವರ ಗಮನಕ್ಕೆ ತಂದಿದ್ದು, ಇಬ್ಬರಿಗೂ ಕೋರಮಂಗಲ ಠಾಣೆಗೆ ಕರೆಯಿಸಿ ಒಂದು ದಿನದ ಠಾಣಾಧಿಕಾರಿಗಳ ಗೌರವ ಸಮರ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News