ಸಿಬಿಎಸ್‍ಇ: ಆಳ್ವಾಸ್ ಸೆಂಟ್ರಲ್ ಸ್ಕೂಲ್‍ಗೆ ಶೇ.100 ಫಲಿತಾಂಶ

Update: 2022-07-23 15:05 GMT

ಮೂಡುಬಿದಿರೆ: ಸಿಬಿಎಸ್‍ಇಯಲ್ಲಿ ಮೂಡುಬಿದಿರೆ ಪುತ್ತಿಗೆಯಲ್ಲಿರುವ ಆಳ್ವಾಸ್ ಸೆಂಟ್ರಲ್ ಸ್ಕೂಲ್‍ನ 147 ವಿದ್ಯಾರ್ಥಿಗಳೂ ತೇರ್ಗಡೆಯಾಗುವ ಮೂಲಕ ಶೇ.100 ಶೇಕಡ ಫಲಿತಾಂಶ ದಾಖಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾರ್ಥಿನಿ ನಿಹಾರಿಕಾ ಶೆಟ್ಟಿ ಶೇ.97.6 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಸಂಜನಾ ಎಸ್.ಜಿ ಶೇ.97.2 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಚೆನ್ನಬಸವ ಶೇ.94.8, ವಂದನಾ ತಲಬಲ ಶೇ.94, ಅರುಣ್ ಪಿ.ಮಾಲಿಪಾಟೀಲ್ ಶೇ.93.8, ಜೀವನ್ ಜಿ.ಎಸ್ ಶೇ.93.2, ಕೆ.ಪ್ರತಾಪ್ ಅಂಚನ್ ಶೇ.92.8, ಕಾರ್ತಿಕ್ ಎಂ.ಗೌಡ ಶೇ.92.6, ಸಮನ್ವಿತ ಶೇ.92.4, ಶ್ರೇಯಸ್ ಎಸ್.ನೀಲರೆಡ್ಡಿ ಶೇ.92, ದೇಬೋಮಿತ ಭಟ್ಟಾಚಾರ್ಯ ಶೇ.92, ಸಿಂಚನ ಎಲ್.ಜಿ ಶೇ.91.8, ಕಾವ್ಯ ಟಿ.ಪಿ ಶೇ.91.8, ಸುಮಂತ ಬಿ. ಶೇ.91.6, ಸಮೃದ್ಧಿ ಎಸ್. 91.2, ಅಮೃತಾ ಕೆ.ಭಟ್ ಶೇ.91.2, ಚಿರಂತ್ ಈ ಶೇ.90.8, ಜೇನಾ ಯು.ಎಸ್ ಶೇ.90.8, ಆಕಾಶ್ ಜಿ. ಶೇ.90.4, ಶ್ರೇಯಾ ದೇವಂದ್ರಪ್ಪಾ ಕಮ್ಮಾರ್ ಶೇ.90 ಸೇರಿದಂತೆ ಒಟ್ಟು 20 ವಿದ್ಯಾರ್ಥಿಗಳು 90 ಶೇಕಡಾಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಸಿಬಿಎಸ್‍ಸಿ ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಶಫಿ, ಆಡಳಿತಾಧಿಕಾರಿ ಪ್ರೀತಮ್ ಕುಂದರ್, ವಿದ್ಯಾರ್ಥಿಗಳ ಶೈಕ್ಷಣಿಕ ಸಂಯೋಜಕ ಗುರುರಾಜ್ ಭಟ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News