ಕನ್ವರ್‌ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್‌ ನಿಂದ ಹೂವುಗಳನ್ನು ಸುರಿದ ಉತ್ತರಪ್ರದೇಶದ ಉನ್ನತ ಅಧಿಕಾರಿಗಳು

Update: 2022-07-26 06:13 GMT

ಲಕ್ನೋ: ಶಿವ ಭಕ್ತರು ಕೈಗೊಳ್ಳುವ ಕನ್ವರ್‌ ಯಾತ್ರೆಯು ದೇಶಾದ್ಯಂತ ನಡೆಯುತ್ತಿದ್ದು, ಉತ್ತರಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ಕನ್ವರಿಗಳ ಮೇಲೆ ಅಲ್ಲಿನ ಹಿರಿಯ ಅಧಿಕಾರಿಗಳು ಸೋಮವಾರ ಹೆಲಿಕಾಪ್ಟರ್‌ ನಲ್ಲಿ ಕುಳಿತು ಹೂವಿನ ದಳಗಳನ್ನು ಸುರಿಸಿದರು. ಈ ಕುರಿತ ವೀಡಿಯೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. 

ಮೀರತ್‌ ನ ಐಜಿ ರೇಂಜರ್‌ ಪ್ರವೀಣ್‌ ಕುಮಾರ್‌ ಹಾಗೂ ಡಿಎಂ ದೀಪಕ್‌ ಮೀನಾ ಹೆಲಿಕಾಪ್ಟರ್‌ ನಲ್ಲಿ ತೆರಳಿ ಹೂದಳಗಳನ್ನು ಸುರಿಸಿದರು. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಶಿವಭಕ್ತರ ಪಾದಗಳನ್ನು ತೊಳೆದರೆ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಯಾತ್ರಾರ್ಥಿಗಳಿಗೆ ಹೂದಳ ಸುರಿದಿದ್ದರು. ಮುಖ್ಯ ರಸ್ತೆಗಳನ್ನು ಸುಂದರಗೊಳಿಸಲಾಗಿದ್ದು, ಹಲವಾರು ದೀಪಗಳನ್ನು ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವೀಡಿಯೋ ಕುರಿತು ಸಾಮಾಜಿಕ ತಾಣದಲ್ಲಿ ಹಲವಾರು ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಜನರ ತೆರಿಗೆಯನ್ನು ಪೋಲು ಮಾಡುವ ಕ್ರಮವಾಗಿದೆ ಎಂದಿದ್ದಾರೆ. "ಯಾತ್ರಿಕರಿಗೆ ಏನಾದರೂ ಸೌಲಭ್ಯಗಳನ್ನು ಮಾಡಿಕೊಡುವುದರ ಬದಲು ಇಂತಹಾ ಕ್ರಮಗಳಿಂದ ಯಾವುದೇ ಉಪಕಾರವಿಲ್ಲ" ಎಂದು ನೆಟ್ಟಿಗರೋರ್ವರು ತಮ್ಮ ಪೋಸ್ಟ್‌ ನಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News