ಪ್ರತಿಭಟನೆಯ ವೇಳೆ ರಾಹುಲ್‌ ಗಾಂಧಿಯನ್ನು ಬಂಧಿಸಿದ ಪೊಲೀಸರು

Update: 2022-07-26 08:05 GMT
Photo: INC

ಹೊಸದಿಲ್ಲಿ: ದಿಲ್ಲಿಯ ಹೃದಯ ಭಾಗದ ರಸ್ತೆಯೊಂದರಲ್ಲಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದ್ದ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬೆಲೆ ಏರಿಕೆ ಮತ್ತು ಜಿಎಸ್‌ಟಿಯಿಂದ ಹಿಡಿದು ತನಿಖಾ ಸಂಸ್ಥೆಗಳಿಂದ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುವವರೆಗೆ ಹಲವಾರು ವಿಷಯಗಳ ಕುರಿತು ಸಂಸತ್ತು ಮತ್ತು ಉನ್ನತ ಸರ್ಕಾರಿ ಕಚೇರಿಗಳ ಸಮೀಪವಿರುವ ರಾಜಪಥ್‌ನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು.

ಸುಮಾರು 30 ನಿಮಿಷಗಳ ಕಾಲ ನೂಕುನುಗ್ಗಲು ಉಂಟಾದ ನಂತರ, ಕಾಂಗ್ರೆಸ್ ಸಂಸದರನ್ನು ಪೊಲೀಸರು ತಡೆದು ನಿಲ್ಲಿಸಿದರು ಮತ್ತು ಈಗಾಗಲೇ ಬಂಧಿತರಾಗಿದ್ದ ಇತರ ಸಂಸದರೊಂದಿಗೆ ಅವರನ್ನು ಬಸ್‌ ನಲ್ಲಿ ಇರಿಸಲಾಯಿತು.

"ಭಾರತ ಪೊಲೀಸ್ ರಾಜ್ಯ, ಮೋದಿ ಒಬ್ಬ ರಾಜ" ಎಂದು ರಾಹುಲ್ ಗಾಂಧಿ ಬಂಧನಕ್ಕೂ ಮುನ್ನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News