×
Ad

ಸಿಎಂ ಬೊಮ್ಮಾಯಿ ನೋವಿನ ಮನೆಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ: ಯು.ಟಿ.ಖಾದರ್

Update: 2022-07-28 20:28 IST
ಯು.ಟಿ.ಖಾದರ್

ಮಂಗಳೂರು, ಜು.28:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರು ಕೊಲೆಯಾದ ಪ್ರವೀಣ್ ನೆಟ್ಟಾರು ಕುಟುಂಬವನ್ನು ಭೇಟಿ ನೀಡಿ ಸಾಂತ್ವನ ಹೇಳಿದ್ದು ಸ್ವಾಗತಾರ್ಹ. ಅದೇ ರೀತಿ ನೋವಿನಲ್ಲಿರುವ ಹತ್ಯೆಯಾದ ಮಸೂದ್ ಕುಟುಂಬದವರನ್ನೂ ಭೇಟಿಯಾಗಿದ್ದರೆ, ನೋವಿನಲ್ಲಿರುವ ಆ ಕುಟುಂಬಕ್ಕೂ ಒಂದು ಧೈರ್ಯ ಸಿಕ್ಕಿದಂತಿತ್ತು ಎಂದು ಶಾಸಕ,  ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. 

ಮುಖ್ಯಮಂತ್ರಿಯವರೂ ನೋವಿನ ಮನೆಯಲ್ಲಿ ತಾರತಮ್ಯ ಮಾಡುವುದು ಸರಿ ಅಲ್ಲ. ಇದರಿಂದ ಮಸೂದ್ ಕುಟುಂಬಕ್ಕೆ ನಷ್ಟವೇನು ಇಲ್ಲ. ಮುಖ್ಯಮಂತ್ರಿ ಗಾದಿಯ ಘನತೆಗೆ ಕುಂದುಟಾಗುತ್ತದೆ ಅಷ್ಟೇ ಎಂದು‌ ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News