ವೀರಶೈವ -ಲಿಂಗಾಯುತ ಸಮುದಾಯವನ್ನು ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಗೆ ಆಗ್ರಹಿಸಿ ಧರಣಿ

Update: 2022-08-01 13:55 GMT

ಉಡುಪಿ: ವೀರಶೈವ -ಲಿಂಗಾಯುತ ಸಮುದಾಯವನ್ನು ಕೇಂದ್ರ ಸರಕಾರದ ಇತರೆ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಯಲ್ಲಿ ಸೇರ್ಪಡೆಗೊಳಿ ಸಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾ ಧಿಕಾರಿ ಕೂರ್ಮಾರಾವ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಮಹಾಸಭಾದ ಯುವ ವಿಭಾಗದ ರಾಜ್ಯಾಧ್ಯಕ್ಷ ಮನೋಹರ್ ಬಿ.ಅಬ್ಬಿಗೆರೆ,  60 ವರ್ಷಗಳಿಂದ ವೀರಶೈವ- ಲಿಂಗಾಯುತ ಸಮುದಾಯವನ್ನು ಇತರೇ ಹಿಂದುಳಿದವರ್ಗ ಎಂದು ಪರಿಗಣಿಸ ಲಾಗಿದ್ದರೂ ಕೇಂದ್ರ ಸರಕಾರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರು ವುದರಿಂದ ಕೇಂದ್ರ ಸರಕಾರದಿಂದ ದೊರೆಯುವ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ದೂರಿದರು.

ನಮ್ಮ ಸಮುದಾಯಕ್ಕೆ ಓಬಿಸಿ ಪಟ್ಟಿಯಲ್ಲಿ ಸೇರದೆ ಇರುವ ಕಾರಣ ನಮ್ಮ ಸಮುದಾಯದ ಜನರು ದಶಕಗಳಿಂದ ಕೇಂದ್ರ ಸರಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರ ನೇಮಕಾತಿ ಅವಕಾಶಗಳಿಂದ ವಂಚಿತರಾಗಿದ್ದರು. ಅಲ್ಲದೆ ಗ್ರಾಮಾಂತರ ಪ್ರದೇಶ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಹಳ ತೊಂದರೆ ಆಗುತ್ತಿದೆ. ಹಲವು ಧರ್ಮದವರಿಗೆ ಮೀಸಲಾತಿಯ ಅನುಕೂಲಗಳು ದೊರೆತಿವೆ. ಆದು ದರಿಂದ ವೀರಶೈವ ಲಿಂಗಾಯುತ ಸಮುದಾಯವನ್ನು ಎಲ್ಲ ಉಪಪಂಗಡ ಗಳನ್ನೂ ಒಳಗೊಂಡಂತೆ ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಮೂಲಕ ಸಮುದಾಯಕ್ಕೆ ಸೌಲಭ್ಯ ದೊರೆಯುವಂತೆ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಗಿರೀಶ್ ಕುಮಾರ್ ಪಾಂಗಾಳ, ಕಾರ್ಯದರ್ಶಿ ಗಿರೀಶ್ ಕಡ್ಡಿಪುಡಿ, ಸುರೇಶ್ ಎಸ್.ಕೆ., ರಾಜ್ಯ ಯುವ ವಿಭಾಗದ ಕಾರ್ಯಾ ಧ್ಯಕ್ಷ ಗೋವರ್ದನ ಜಿ.ಸಿ, ರಾಜ್ಯ ಕಾರ್ಯದರ್ಶಿ ಅಕ್ಷತಾ ಎಂ.ಎಂ., ನಿರ್ದೇಶಕ ಎಂ.ಡಿ.ಸುರೇಶ್, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಶಂಕರಮಠ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News