×
Ad

ಮಂಗಳೂರು: ಯಾಂತ್ರಿಕ ಮೀನುಗಾರಿಕೆ ಆರಂಭ

Update: 2022-08-01 19:33 IST

ಮಂಗಳೂರು: ಯಾಂತ್ರಿಕ ಮೀನುಗಾರಿಕೆಗೆ ಹೇರಿದ್ದ ನಿಷೇಧದ ಅವಧಿಯು ರವಿವಾರಕ್ಕೆ ಮುಗಿದಿದ್ದು, ಸೋಮವಾರದಿಂದ ಬಂದರ್ ಧಕ್ಕೆಯಲ್ಲಿ ಮೀನುಗಾರಿಕೆ ಮತ್ತೆ ಆರಂಭಗೊಂಡಿದೆ.

ಕಳೆದ ಎರಡು ತಿಂಗಳಿನಿಂದ ದಡ ಸೇರಿದ್ದ ಯಾಂತ್ರಿಕ ಮೀನುಗಾರಿಕಾ ಬೋಟ್‌ಗಳ ಪೈಕಿ ಕೆಲವು ಸೋಮವಾರ ಕಡಲಿಗೆ ಇಳಿದಿವೆ. ಹಾಗಾಗಿ ಬಿಕೋ ಎನ್ನುತ್ತಿದ್ದ ಬಂದರ್ ಧಕ್ಕೆಯಲ್ಲಿ ಚಟುವಟಿಕೆ ಶುರುವಾಗಿವೆ. ಆದರೆ ಕಡಲು ಪ್ರಕ್ಷುಬ್ಧಗೊಂಡಿರುವ ಕಾರಣ ಹೆಚ್ಚಿನ ಬೋಟ್‌ಗಳು ಕಡಲಿಗೆ ಇಳಿದಿಲ್ಲ. ಅಲ್ಲದೆ ಹೊರ ರಾಜ್ಯದ ಮೀನು ಕಾರ್ಮಿಕರ ಪೈಕಿ ಅಧಿಕ ಮಂದಿ ಇನ್ನೂ ಬಂದರ್ ಧಕ್ಕೆ ಪ್ರವೇಶಿಸದ ಕಾರಣ ಮೀನುಗಾರಿಕೆಯು ಸಂಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲು ಇನ್ನೊಂದೆರಡು ದಿನ ಬೇಕಾದೀತು ಎಂದು ಬೋಟ್ ಮಾಲಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News