×
Ad

ಫಾಝಿಲ್ ಹತ್ಯೆಕೋರರ ಗುರಿಯಾಗಿದ್ದ: ಕಮಿಷನರ್ ಶಶಿಕುಮಾರ್‌

Update: 2022-08-02 13:10 IST
ಅಜಿತ್‌ ಕ್ರಾಸ್ತ, ಶ್ರೀನಿವಾಸ್, ಮೋಹನ್, ದೀಕ್ಷಿತ್
ಗಿರಿಧರ್‌, ಅಭಿಷೇಕ್, ಸುಹಾಸ್

ಮಂಗಳೂರು, ಆ. 2: ಸುರತ್ಕಲ್ ನಲ್ಲಿ ಜು. 28ರಂದು ಭೀಕರವಾಗಿ ಫಾಝಿಲ್ ಎಂಬವರನ್ನು ಕೊಲೆ ಮಾಡಲಾಗಿದು, ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

ಬಂಧಿತರನ್ನು ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿ (29),  ಕುಳಾಯಿಯ ಮೋಹನ್ ಅಲಿಯಾಸ್ ನೇಪಾಲಿ ಮೋಹನ್, ಮೋಹನ್ ಸಿಂಗ್  (26),  ಗಿರಿಧರ್ (23), ಸುರತ್ಕಲ್ ನ ಅಭಿ಼ಷೇಕ್(21), ಶ್ರೀನಿವಾಸ್(23), ದೀಕ್ಷಿತ್(21) ಎಂಬ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು  ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಈ ಎಲ್ಲಾ ಆರೋಪಿಗಳು ನೇರವಾಗಿ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದು ಜು. 26ರಂದು ರಾತ್ರಿಯಿಂದಲೇ ಎಲ್ಲರೂ ಒಬ್ಬರಿಗೊಬ್ಬರು ಮಾತನಾಡಿಕೊಂಡು ಸುಮಾರು 7 ಮಂದಿಯನ್ನು ಗುರಿಯಾಗಿಸಿಕೊಂಡು ಹತ್ಯೆಗೆ ಮುಂದಾಗಿದ್ದರು. ಕೊನೆಗೆ ಜುಲೈ 28ರಂದು ಫಾಝಿಲ್ ಅವರನ್ನೇ  ಗುರಿಯಾಗಿಸಿ ಹತ್ಯೆಗೆ ಸಂಚು ಹಾಕಿದ್ದರು. ಹತ್ಯೆಗೆ ನಿಖರ ಕಾರಣ ಮುಂದಿನ ತನಿಖೆಯಿಂದ ತಿಳಿದು ಬರಲಿದೆ.

ಹತ್ಯೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಇಂದು ಮುಂಜಾನೆ 5.30ರ ವೇಳೆಗೆ ಉದ್ಯಾವರ ಬಳಿ ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News