ಪಿಎಸ್ಸೈ ನೇಮಕಾತಿ ಹಗರಣ: ಅಮೃತ್ ಪೌಲ್ ಆಪ್ತರ ಮನೆಗಳ ಮೇಲೆ ಸಿಐಡಿ ದಾಳಿ
Update: 2022-08-03 17:47 IST
ಬೆಂಗಳೂರು, ಆ.3: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಆಪ್ತರ ಮನೆಗಳ ಸಿಐಡಿ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದೆ.
ಜಕ್ಕೂರಿನ ಶಂಭುಲಿಂಗ ಹಾಗೂ ಬೊಮ್ಮಸಂದ್ರದ ಹುಸ್ಕೂರ್ ನಿವಾಸಿ ಆನಂದ್ ಎಂಬುವವರ ಮನೆಗಳ ಮೇಲೆ ಸಿಐಡಿ ತನಿಖಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಜಕ್ಕೂರಿನ ಶಂಭುಲಿಂಗ ಅವರು ರಾಯಚೂರು ಮೂಲದ ಎಎಸ್ಸೈ ಅವರ ಪುತ್ರನಾಗಿದ್ದು, 6 ಕೋಟಿ ಮೌಲ್ಯದ ಫ್ಲ್ಯಾಟ್ ಹಾಗೂ 15 ಕೋಟಿಗೂ ಅಧಿಕ ಮೌಲ್ಯದ ಜಮೀನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಅದೇರೀತಿ, ಹುಸ್ಕೂರು ಆನಂದ್ ಕೂಡ ಅಮೃತ್ ಪೌಲ್ ಜೊತೆ ಸೇರಿ ಹಣದ ವಾಹಿವಾಟು ನಡೆಸಿದ್ದಾರೆ ಎನ್ನಲಾಗಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ತಿಳಿದುಬಂದಿದೆ.