ತಲವಾರು ದಾಳಿ ವದಂತಿ: ತನಿಖೆಗೆ ಯು.ಟಿ.ಖಾದರ್ ಆಗ್ರಹ
Update: 2022-08-03 22:37 IST
ಮಂಗಳೂರು, ಆ.3: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಿನಡ್ಕ ಮುಳ್ಳುಗುಡ್ಡೆ ಪ್ರದೇಶದಲ್ಲಿ ತಲವಾರು ದಾಳಿಯ ವದಂತಿಯನ್ನು ಹಬ್ಬಿದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮಾಜಿ ಸಚಿವ, ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ತಲವಾರು ದಾಳಿಯ ಸುಳ್ಳು ಕಥೆ ಕಟ್ಟಿದವನ ವಿರುದ್ಧ ಪೊಲೀಸರ ಸಕಾಲಿಕ ಕ್ರಮ ಶ್ಲಾಘನೀಯವಾಗಿದೆ. ಆದರೆ ಉಳ್ಳಾಲದ ಶಾಂತಿಯನ್ನು ಕೆಡಿಸಲು ಪ್ರಯತ್ನಿಸಿದ ಈ ಘಟನೆಯನ್ನು ಗೃಹ ಇಲಾಖೆಯು ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ಶಕ್ತಿಯನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.