ಮೊಟ್ಟೆ ವಿತರಣೆ ಯೋಜನೆ | ತೇಜಸ್ವಿನಿ ಅನಂತಕುಮಾರ್ ಸಮಾನತೆಯ ಪರಿಕಲ್ಪನೆಯನ್ನೇ ತಿರುಚಿದ್ದಾರೆ: ನಿರಂಜನಾರಾಧ್ಯ

Update: 2022-08-04 13:56 GMT

ಬೆಂಗಳೂರು, ಆ.4: ಅದಮ್ಯ ಚೇತನದ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಅವರ ಮೊಟ್ಟೆ ವಿಚಾರ ಸಂವಿಧಾನದಲ್ಲಿನ ಸಮಾನತೆಯ ಪರಿಕಲ್ಪನೆಯನ್ನು ತಿರುಚಿ, ತಮ್ಮ ಅನುಕೂಲಕ್ಕೆ ಹೊಂದುವಂತೆ ಬಳಸಿಕೊಳ್ಳುವ ಅವರ ಮನಸ್ಥಿತಿಯನ್ನು ಬಯಲು ಮಾಡುತ್ತದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಖಂಡಿಸಿದ್ದಾರೆ.

ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಕರ್ನಾಟಕ ಸರಕಾರವು ಮಕ್ಕಳಲ್ಲಿನ ಅಪೌಷ್ಟಿಕತೆ ತೊಡೆದು ಹಾಕಲು ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವ ತೀರ್ಮಾನವನ್ನು ಡಾ.ತೇಜಸ್ವಿನಿ ಅನಂತಕುಮಾರ್ ಪ್ರಶ್ನಿಸಿದ್ದಾರೆ.‘ಮೊಟ್ಟೆ ನೀಡುವುದರಿಂದ ಅಸಮಾನತೆ ಸೃಷ್ಟಿಯಾಗುತ್ತದೆ.ಸಸ್ಯಾಹಾರಿಗಳಾಗಿರುವ ಅನೇಕ ವಿದ್ಯಾರ್ಥಿಗಳನ್ನು ಹೊರಗಿಡುತ್ತದೆ.ಜೊತೆಗೆ, ಸರಕಾರಕ್ಕೆ ಸಮಾನ ಅವಕಾಶ ಸಿಗುವಂತೆ ನೀತಿಗಳನ್ನು ರೂಪಿಸಬೇಕು’ ಎಂದು ಡಾ.ತೇಜಸ್ವಿನಿ ಅನಂತಕುಮಾರ್ ನೀತಿ ಪಾಠ ಮಾಡಿದ್ದಾರೆ. 

ಆದರೆ ಮೊಟ್ಟೆತಿನ್ನುವ ಮಕ್ಕಳಿಗೆ ಮೊಟ್ಟೆ ಕೊಡುವುದರಿಂದ ಅಸಮಾನತೆಯಾಗಲಿ, ಪಂಕ್ತಿ ಭೇದವಾಗಲಿ ಸೃಷ್ಟಿಯಾಗುವುದಿಲ್ಲ. ಕಾರಣ, ಮೊಟ್ಟೆತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾಚಿಕ್ಕಿಯನ್ನು ನೀಡಲಾಗುತ್ತದೆಎಂದು ತಿಳಿಸಿದ್ದಾರೆ.

‘ಒಬ್ಬರಧಾರ್ಮಿಕ ನಂಬಿಕೆ ಅಥವಾಆಹಾರ ಪದ್ಧತಿಯನ್ನುಕ್ರಮವನ್ನು ಬಲವಂತವಾಗಿ ಮತ್ತೊಬ್ಬರ ಮೇಲೆ ಹೇರುವುದುಅಥವಾ ನಾನು ಸೇವಿಸುವ ಆಹಾರವನ್ನೇ ಎಲ್ಲರೂ ಸೇವಿಸಬೇಕು ಎಂಬುದು ಸರ್ವಾಧಿಕಾರಿ ಧೋರಣೆಯೇ ಹೊರತು ಸಮಾನತೆಯಲ್ಲ ಎಂದು ನಿರಂಜನಾರಾಧ್ಯ ವಿ.ಪಿ.ಕಿಡಿಕಾರಿದ್ದಾರೆ.

ಶಾಲಾ ಶಿಕ್ಷಣದ ಅವಕಾಶ, ಪಠ್ಯಕ್ರಮ, ಕಲಿಕೆ, ಮಾಧ್ಯಮ, ಮೂಲಭೂತ ಸೌಕರ್ಯಗಳಲ್ಲಿ ನಿಜವಾದ ಅಸಮಾನತೆ ಇದೆ.ಉಳ್ಳವರಿಗೆ ಒಂದು ಬಗೆಯ ಶಿಕ್ಷಣ, ಬಡವರಿಗೆ ಮತ್ತೊಂದು ಬಗೆಯ ಶಿಕ್ಷಣ, ಬಹು ದೊಡ್ಡ ಅಸಮಾನತೆ, ಪ್ರತ್ಯೇಕತೆ ಹಾಗು ತಾರತಮ್ಯವನ್ನು ಸೃಷ್ಟಿಸಿದೆ.ಇಷ್ಟು ಸಾಲದುಎಂಬಂತೆ, ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣ ಈ ಅಸಮಾನತೆಯ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದನ್ನುತೊಡೆದು ಹಾಕಬೇಕಾದರೆ, ಎಲ್ಲಾ ಮಕ್ಕಳಿಗೆ ಕೊಥಾರಿ ಆಯೋಗದ ಶಿಫಾರಸ್ಸಿನಂತೆ, ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವುದು ನಿಜವಾದ ಸಮಾನತೆ ಸಾಧಿಸುವ ನೀತಿರೂಪಿಸುವ ಆಶಯವಾಗುತ್ತದೆ ಎಂದು ಕರೆ ನೀಡಿದ್ದಾರಂತೆ. ಮೊಟ್ಟೆ ವಿತರಣೆ ಯೋಜನೆಯಿಂದ ಕನಿಷ್ಠ ಪೌಷ್ಟಿಕ ಆಹಾರದ ಅನುಕೂಲ ಪಡೆಯುತ್ತಿರುವ ಮಕ್ಕಳಿಗಾಗಲಿ ಅಥವಾಅವರ ಪಾಲಕರಿಗಾಗಲಿ, ಯೋಜನೆಯನ್ನು ಜಾರಿಗೊಳಿಸುತ್ತಿರುವ ಎಸ್ಡಿಎಂಸಿ, ಅಡುಗೆ ಸಿಬ್ಬಂದಿ ಅಥವಾ ಶಿಕ್ಷಕರಿಗಾಗಲಿ ಈ ಬಗ್ಗೆ ಯಾವುದೇತಕರಾರಿಲ್ಲ.

ಆದರೆ, ಯೋಜನೆಯಲ್ಲಿ ರಾಜಕೀಯ ಬೆರೆಸಿ ಶೋಷಿತ ವರ್ಗದ ಆಹಾರದ ಹಕ್ಕನ್ನು ಮೊಟಕುಗೊಳಿಸುವ ಕೆಲವೇ ಮನಸ್ಥಿತಿಗಳು ಯೋಜನೆಯ ಅನುಷ್ಠಾನವನ್ನು ಹತ್ತಿಕ್ಕಿ ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿದ್ದು, ಸರಕಾರ ಹಾಗು ಇಲಾಖೆ ಇದಕ್ಕೆ ಮಣಿಯಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬಾಹ್ಯವಾಗಿ ಕಾರ್ಯನಿರ್ವಹಿಸುತ್ತಿರುವ  ಸನಾತನ ಮನಸ್ಥಿತಿಯ ಯಾಜಮಾನ್ಯವು ಮೇಲುಗೈ ಸಾಧಿಸಿದ್ದು, ಶಿಕ್ಷಣ ಇಲಾಖೆಯಲ್ಲಿನ ಹಲವು ಪ್ರಾಮಾಣಿಕ ಅಧಿಕಾರಿಗಳು ಮಕ್ಕಳ ಪರವಾಗಿ ಯೋಚಿಸಿ ತೆಗೆದುಕೊಳ್ಳುವ ಕೆಲವೇ  ಪ್ರಮುಖ ತೀರ್ಮಾನಗಳನ್ನು ದಾರಿ ತಪ್ಪಿಸಿ, ಮಕ್ಕಳು, ಅದರಲ್ಲೂ ವಿಶೇಷವಾಗಿ ಬಡ ಹಾಗು ಅವಕಾಶವಂಚಿತ ಮಕ್ಕಳ ಬದುಕಿಗೆ ಮಾರಕವಾಗುವ ರೀತಿಯಲ್ಲಿ ಬೆಳವಣಿಗೆ ಆಗುತ್ತಿರುವುದುಅತ್ಯಂತ ವಿಷಾದನೀಯ ಹಾಗು ದುರದೃಷ್ಟಕರ. ಮೊಟ್ಟೆ ವಿತರಣೆ ಕುರಿತು ಅದಮ್ಯಚೇತನದ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿಕೆಯೇ ಇದಕ್ಕೆ ಸಾಕ್ಷಿಯಾಗಿದೆ.

-ನಿರಂಜನಾರಾಧ್ಯ ವಿ.ಪಿ., ಅಭಿವೃದ್ಧಿ ಶಿಕ್ಷಣ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News