ಯೆನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಸ್ನೇಹ ಮಿಲನ ಕಾರ್ಯಕ್ರಮ

Update: 2022-08-06 08:11 GMT

ಉಳ್ಳಾಲ : ಮಾನವನ ಆರೋಗ್ಯ ಕಾಪಾಡುವಲ್ಲಿ  ಯೆನ್ ಮಿತ್ರ ಹಾಗೂ ಯೆನ್ ಸಹಯೋಗ್ ಇದರ ಸಹಕಾರ ಬಹಳಷ್ಟು ಇದೆ. ಇದರ ಪ್ರತಿನಿಧಿಗಳ ಜೊತೆ ಹಮ್ಮಿಕೊಂಡಿರುವ ಸ್ನೇಹ ಮಿಲನ  ಸೌಹಾರ್ದತೆಯನ್ನು ಉಳಿಸಲು ಪ್ರೇರಣೆ ನೀಡುತ್ತದೆ ಎಂದು ಡಾ.ಸುನಿತಾ ಸಲ್ದಾನ  ಹೇಳಿದರು.

ಅವರು ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ಆಶ್ರಯದಲ್ಲಿ ಯೆನೆಪೊಯ ಲೆಕ್ಚರ್ ಹಾಲ್ ನಲ್ಲಿ ನಡೆದ ಸ್ನೇಹ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯಕೀಯ ಅಧೀಕ್ಷಕ ಡಾ. ಪ್ರಕಾಶ್ ಸಲ್ದಾನ ವಹಿಸಿ ಮಾತನಾಡಿ, ಯೆನೆಪೊಯ ಆಸ್ಪತ್ರೆ ಜನರ ಅನುಕೂಲಕ್ಕಾಗಿ ವಿಸ್ತರಣೆ ಮಾಡಲಾಗಿದೆ. ಕೊರೋನ ಸಮಯದಲ್ಲಿ ಬಹಳ ಕಷ್ಟಪಟ್ಟು ರೋಗಿಗಳ ಆರೈಕೆ ಮಾಡುವಲ್ಲಿ ಯೆನ್ ಮಿತ್ರ ಹಾಗೂ ಯೆನ್ ಸಹಯೋಗ್ ಪ್ರತಿನಿಧಿಗಳ ಸಹಕಾರ ಸಿಕ್ಕಿದೆ. ಜನರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಆ ಕಾರ್ಯ ನಮ್ಮಿಂದ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ  ಡಾ.ನಾಗರಾಜ್ ಉಪಸ್ಥಿತರಿದ್ದರು. ಡಾ. ಮುಹಮ್ಮದ್ ಗುತ್ತಿಗಾರ್ ಸ್ವಾಗತಿಸಿದರು. ಗ್ಲಾಡೀಸ್ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಝಾಕ್ ಕಿರಾಅತ್ ಪಠಿಸಿದರು. ವಿಜಯಾನಂದ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News