ಮೆಟ್ರೋ ರೈಲು: ಪ್ರಯಾಣಿಕರ ಅನುಕೂಲಕ್ಕೆ ಸಮಯ ಬದಲಾವಣೆ

Update: 2022-08-06 14:50 GMT

ಬೆಂಗಳೂರು: ಸೋಮವಾರದಿಂದ ಪ್ರತಿದಿನ ಮುಂಜಾನೆ ಹಾಗೂ ರಾತ್ರಿ 15 ನಿಮಿಷಕ್ಕೊಮ್ಮೆ ಮೆಟ್ರೊ ಸಂಚಾರ ಮಾಡಲಿದೆ.

ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಯಿಂದ 6ರವರೆಗೆ ಹಾಗೂ ರಾತ್ರಿ 10 ರಿಂದ 11 ಗಂಟೆವರೆಗೆ 15 ನಿಮಿಷಕ್ಕೊಮ್ಮೆ ಮೆಟ್ರೊ ರೈಲು ಸಂಚರಿಸಲಿದೆ. ಇದಕ್ಕೂ ಮೊದಲು ಪ್ರತಿ 20 ನಿಮಿಷಕ್ಕೊಂದು ಮೆಟ್ರೋ ಸಂಚರಿಸುತ್ತಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಮೆಟ್ರೋ ಸಂಚಾರದಲ್ಲಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ಬಿಎಮ್‍ಆರ್ ಸಿಎಲ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News