×
Ad

ಬಿಕರ್ನಕಟ್ಟೆ: ಸ್ಕೂಟರ್ ಸವಾರ ಮೃತ್ಯು

Update: 2022-08-06 21:41 IST

ಮಂಗಳೂರು, ಆ.6: ರಸ್ತೆಯ ಗುಂಡಿ ತಪ್ಪಿಸಲು ಮುಂದಾದ ಸವಾರನ ನಿಯಂತ್ರಣ ತಪ್ಪಿದ ಸ್ಕೂಟರ್ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 73ರ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಶುಕ್ರವಾರ ನಡೆದಿದೆ.

ಕೊಂಚಾಡಿ ನಿವಾಸಿ ಆತೀಶ್ (20) ಮೃತಪಟ್ಟ ಸ್ಕೂಟರ್ ಸವಾರ. ಇವರು ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಯ ರಸ್ತೆಯಲ್ಲಿ ತೆರಳುತ್ತಿದ್ದರು. ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಡಿವೈಡರ್ ಪಕ್ಕದಲ್ಲಿದ್ದ ಹೊಂಡವನ್ನು ಮಳೆಯಿಂದಾಗಿ ಗಮನಿಸದೆ ಕೊನೆಯ ಕ್ಷಣದಲ್ಲಿ ಹೊಂಡ ತಪ್ಪಿಸಲು ಯತ್ನಿಸಿದರು. ಆವಾಗ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಢಿಕ್ಕಿ ಹೊಡೆದು ಸುಮಾರು 50 ಅಡಿ ದೂರಕ್ಕೆ ಹೋಗಿ ಬಿತ್ತು ಎಂದು ಎನ್ನಲಾಗಿದೆ.

ಆತೀಶ್‌ರ ತಲೆಯು ಡಿವೈಡರ್ ಮಧ್ಯೆ ಅಳವಡಿಸಿದ ರಿಫ್ಲೆಕ್ಟರ್ ಕಬ್ಬಿಣದ ಕಂಬಕ್ಕೆ ಬಡಿಯಿತು. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News