ಬಿಜೆಪಿ ಎಂಬ ಗಾಂಪರ ಗುಂಪು ತೆಗೆದುಕೊಳ್ಳುವ ನಿರ್ಧಾರಗಳಿಗೆ ರಾಷ್ಟ್ರಧ್ವಜದ ಘನತೆ ಮಣ್ಣುಪಾಲು: ಕಾಂಗ್ರೆಸ್ ಟೀಕೆ

Update: 2022-08-07 08:14 GMT

ಬೆಂಗಳೂರು, ಆ.7: ದೇಶಭಕ್ತಿಯನ್ನು ವ್ಯಾಪಾರದ ಸರಕು ಎಂದುಕೊಂಡಿರುವ ಬಿಜೆಪಿ ಎಂಬ ಗಾಂಪರ ಗುಂಪು ತೆಗೆದುಕೊಳ್ಳುವ ನಿರ್ಧಾರಗಳಿಗೆ ರಾಷ್ಟ್ರಧ್ವಜದ ಘನತೆ ಮಣ್ಣು ಪಾಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ರಾಷ್ಟ್ರ ಧ್ವಜವನ್ನು ಕರ್ಚಿಫ್‌ನಂತೆ ಭಾವಿಸಿದೆ. ಸ್ವಾಭಿಮಾನದ ಸಂಕೇತವಾದ ತಿರಂಗಾಕ್ಕೆ ಅದರದ್ದೇ ಗೌರವ, ನೀತಿ, ನಿಯಮಗಳಿವೆ. ಜನಸಾಮಾನ್ಯರು ದೋಷಪೂರಿತ ಧ್ವಜಗಳನ್ನು ಹಾರಿಸಿದಲ್ಲಿ ಅದರ ಹೊಣೆಯನ್ನು, ಅವರ ಪಾಲಿನ ಶಿಕ್ಷೆಯನ್ನು ಬಿಜೆಪಿ ಹೊರುತ್ತದೆಯೇ? ಧ್ವಜವನ್ನು ಟವೆಲ್‌ಗಿಂತಲೂ ಕಳಪೆಯಾಗಿ ತಯಾರಿಸಿದವರಿಗೆ ಯಾವ ಶಿಕ್ಷೆ ಎಂದು ಪ್ರಶ್ನಿಸಿದೆ.

ಲಕ್ಷಾಂತರ ದೋಷಪೂರಿತ ರಾಷ್ಟ್ರಧ್ವಜಗಳನ್ನು ವಿತರಿಸಿದವರಿಗೆ ಯಾವ ಶಿಕ್ಷೆ? ಕೇವಲ ವ್ಯಾಪಾರಕ್ಕಾಗಿ ಗೌರವದ ಸಂಕೇತವಾದ ಧ್ವಜಕ್ಕೆ ಅಪಚಾರ ಎಸಗುತ್ತಿರುವುದು ಸಹಿಸಲಾಸಾಧ್ಯ ಎಂದು ಹೇಳಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆ.13ರಿಂದ 15ರವರೆಗೆ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಹರ್ ಘರ್ ತಿರಂಗ ಅಭಿಯಾನ ಹಮ್ಮಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ದೇಶದ ಹಲವೆಡೆ ರಾಷ್ಟ್ರಧ್ವಜವನ್ನು ವಿತರಿಸಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News