ಉಳ್ಳಾಲ: 'ಟಿಪ್ಪು ಹೌಸ್' ಹಸ್ತಾಂತರ ಕಾರ್ಯಕ್ರಮ

Update: 2022-08-07 12:32 GMT

ಉಳ್ಳಾಲ: ನೂತನ ಮನೆ ನಿರ್ಮಿಸಿ ಕೊಡುವ ಮೂಲಕ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಸಮಾಜ ಸೇವೆಯಲ್ಲಿ ನಿರತವಾಗಿದೆ. ಮನೆ ನಿರ್ಮಾಣ ಸುಲಭದ ಕೆಲಸ ಅಲ್ಲ. ಆದರೆ ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ಈ ಕಾರ್ಯದಲ್ಲಿ ಯಶಸ್ಸು ಸಾಧಿಸಿದೆ. ಇಂತಹ ಸೇವೆಗೆ ಸಹಕಾರ ಖಂಡಿತ ಇದೆ ಎಂದು ಶಾಸಕ ಯುಟಿ ಖಾದರ್ ಹೇಳಿದರು.

ಅವರು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ದ.ಕ. ಜಿಲ್ಲಾ ಸಮಿತಿ ಇದರ ಆಶ್ರಯದಲ್ಲಿ ಸುಭಾಷ್ ನಗರ ಸಮುದಾಯ ಭವನದಲ್ಲಿ ನಡೆದ ಟಿಪ್ಪು ಹೌಸ್ ನೂತನ ಮನೆಯ ಹಸ್ತಾಂತರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನೂತನ ಮನೆಯ ಕೀ ಯನ್ನು ಶಾಸಕ ಯುಟಿ ಖಾದರ್ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಐವನ್ ಡಿಸೋಜ, ಪಟ್ಟಾಭಿರಾಮ ಸೋಮಯಾಜಿ ಮಾತನಾಡಿದರು. ಅಧ್ಯಕ್ಷತೆಯನ್ನು ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ಜಿಲ್ಲಾಧ್ಯಕ್ಷ ಶಾಫಿ ಬಬ್ಬುಕಟ್ಟೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ  ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಪ್ರೆಡ್ ಡಿಸೋಜ, ಎ.ಕೆ ಕುಕ್ಕಿಲ, ಫಾರೂಕ್ ಉಳ್ಳಾಲ್,  ಕೆಎಂಕೆ ಮಂಜನಾಡಿ, ವಿದ್ಯಾಧರ್ ಶೆಟ್ಟಿ, ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆ ರಾಜ್ಯಾಧ್ಯಕ್ಷ  ಖಾಸಿಂ ಅಲಿ, ಇಬ್ರಾಹಿಂ ಲಬ್ಬೈಕ್, ಅಲಿಮೋನು, ವಿಷ್ಣು ಮೂರ್ತಿ ಭಟ್, ಸಾದಿಕ್ ಶೇಕ್, ಕಮಲಾಕ್ಷ, ಭಾಸ್ಕರ್ ಕುಲಾಲ್, ಅಝೀಝ್,   ಬಶೀರ್ ಅಹ್ಮದ್, ನಝೀರ್ ಬಾರ್ಲಿ, ರೆಹನಾ ಬಾನು, ದಲಿತ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಯಶೋಧಾ, ಗೀತಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಮ್ಯಾಕ್ಸಿಮ್, ಕಾರ್ಯದರ್ಶಿ ಓಸ್ವಾಲ್ಡ್ ಮತ್ತಿತರರು ಉಪಸ್ಥಿತರಿದ್ದರು.

ಆರ್ ಕೆ ಅಮ್ಮೆಂಬಳ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News