ಉರ್ವಸ್ಟೋರ್: ‘ನೀಲ್‌ಗಿರೀಸ್’ ಸೂಪರ್ ಮಾರ್ಕೆಟ್ ಶುಭಾರಂಭ

Update: 2022-08-07 17:45 GMT

ಮಂಗಳೂರು, ಆ.7: ನಗರದ ಉರ್ವಸ್ಟೋರ್‌ನಲ್ಲಿರುವ ಮೊಹ್ತೆಶಾಮ್ ಕಾಂಪ್ಲೆಕ್ಸಸ್ ಪ್ರೈ.ಲಿ.ನ ‘ಕೆನೊಪಿ’ ವಸತಿ ಸಮುಚ್ಚಯದಲ್ಲಿ ‘ನೀಲ್‌ಗಿರೀಸ್’ ಸೂಪರ್ ಮಾರ್ಕೆಟ್ ರವಿವಾರ ಶುಭಾರಂಭಗೊಂಡಿತು.

ಶಾಸಕ ವೇದವ್ಯಾಸ ಕಾಮತ್ ‘ನೀಲ್‌ಗಿರೀಸ್ ಸೂಪರ್ ಮಾರ್ಕೆಟ್’ನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ತೆರೆಯಲ್ಪಟ್ಟ ‘ನೀಲ್‌ಗಿರೀಸ್’ನ ಮೂರನೇ ಸೂಪರ್ ಮಾರ್ಕೆಟ್ ಇದಾಗಿದೆ. ಇದು ಉರ್ವಸ್ಟೋರ್-ಅಶೋಕನಗರ ಪರಿಸರದ ಜನರಿಗೆ ತುಂಬಾ ಪ್ರಯೋಜನವಾಗಲಿದೆ. ಮಿತದರಲ್ಲಿ ಗುಣಮಟ್ಟದ ವಸ್ತುಗಳ ಪೂರೈಕೆಯಲ್ಲಿ ‘ನೀಲ್‌ಗಿರೀಸ್’ ಪ್ರಸಿದ್ಧಿ ಪಡೆದಿದೆ. ಇದನ್ನು ಸಾರ್ವಜನಿಕರು ಸದುಪಯೋಗಪಡಿಸ ಬಹುದಾಗಿದೆ ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ ಶುಭ ಹಾರೈಸಿದರು.

ಈ ಸಂದರ್ಭ ಮೊಹ್ತೆಶಾಮ್ ಕಾಂಪ್ಲೆಕ್ಸಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕರಾದ ಎಸ್.ಎಂ.ಅರ್ಷದ್, ಎಸ್.ಎಂ.ಸವೂದ್, ಎಸ್.ಎಂ. ಅಶ್ಫಾಕ್, ತ್ವಯ್ಯಬ್ ಎ., ಎಸ್.ಎಂ. ಅಸದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News