ಜನ ಧಂಗೆ ಏಳದೆ ಸುರತ್ಕಲ್ ಟೋಲ್ ಲೂಟಿಗೆ ಅಂತ್ಯ ಕಷ್ಟ: ಮುನೀರ್ ಕಾಟಿಪಳ್ಳ

Update: 2022-08-08 17:03 GMT

ಸುರತ್ಕಲ್, ಆ.8: ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕ ಸಂಗ್ರಹದ ಒಂದು ವರ್ಷದ ಅವಧಿಯ ಗುತ್ತಿಗೆ ನವೀಕರಣ ಇಂದು ಅಧಿಕೃತವಾಗಿ ನಡೆದಿದೆ. ಈ‌ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಸೇರಿದಂತೆ ಬಿಜೆಪಿ ಶಾಸಕರು ಅಂದರೆ ಇಷ್ಟೆ.  ಜನ ಧಂಗೆ ಏಳದೆ ಸುರತ್ಕಲ್ ಟೋಲ್ ಲೂಟಿಗೆ ಅಂತ್ಯ ಕಷ್ಟ ಸಾಧ್ಯ ಎಂದು ಎನ್ಐಟಿಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರೋತ್ಸವದ ಕೊಡುಗೆಯಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವು ಘೋಷಣೆ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆ ಮೂಲಕ ಇತ್ತೀಚೆಗೆ ಬಿಜೆಪಿ ಸರಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಎದ್ದಿರುವ ಜನಾಕ್ರೋಶದ ಡ್ಯಾಮೇಜ್ ಕಂಟ್ರೋಲ್ ಗೆ ಪ್ರಯತ್ನ ನಡೆಸುತ್ತಾರೆ ಎಂಬ ನಿರೀಕ್ಷೆಯೂ ಇತ್ತು. ಆದರೆ, ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕ ಸಂಗ್ರಹದ ಒಂದು ವರ್ಷದ ಅವಧಿಯ ಗುತ್ತಿಗೆ ನವೀಕರಣ ಇಂದು ಅಧಿಕೃತವಾಗಿ ನಡೆದಿದೆ. 13 ಲಕ್ಷ ಇದ್ದ ದಿನದ ಸಂಗ್ರಹದ ಟಾರ್ಗೆಟ್ ಅನ್ನು 12 ಲಕ್ಷಕ್ಕೆ ಇಳಿಸಲಾಗಿದೆ. ಆ ಮೂಲಕ ಗುತ್ತಿಗೆದಾರರು ಮಾತ್ತು ಅವರಿಂದ ಕಮೀಷನ್ ಪಡೆಯುವವರ ಜೇಬು ಮತ್ತಷ್ಟು ದಪ್ಪ ಆಗಲಿದೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಸೇರಿದಂತೆ ಬಿಜೆಪಿ ಶಾಸಕರು ಅಂದರೆ ಇಷ್ಟೆ.  ಜನ ಧಂಗೆ ಏಳದೆ ಸುರತ್ಕಲ್ ಟೋಲ್ ಲೂಟಿಗೆ ಅಂತ್ಯ ಕಷ್ಟ ಸಾಧ್ಯ ಎಂದು ಮುನೀರ್ ಕಾಟಿಪಳ್ಳ ಸಂಸದರು ಮತ್ತು ಶಾಸಕರ ವಿರುದ್ಧ ಪ್ರಕಟನೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News