ಮಹಿಳೆಯರಿಗೆ ಅನ್ಯಾಯ; ಮಹಾರಾಷ್ಟ್ರ ಸಚಿವ ಸಂಪುಟ ವಿರುದ್ಧ ಎನ್‍ಸಿಪಿ ಟೀಕೆ

Update: 2022-08-10 02:44 GMT
ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ

ಮುಂಬೈ: ಮಹಾರಾಷ್ಟ್ರ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಯಾವುದೇ ಪ್ರಾತಿನಿಧ್ಯ ನೀಡದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕ್ರಮವನ್ನು ಎನ್‍ಸಿಪಿ ಸಂಸದೆ ಸುಪ್ರಿಯಾ ಸುಳೆ ಕಟುವಾಗಿ ಟೀಕಿಸಿದ್ದಾರೆ.

"ಶಿಂಧೆ-ಫಡ್ನವೀಸ್ ಸರ್ಕಾರದಲ್ಲಿ ಮಹಿಳೆಯರಿಗೆ ಒಂದು ಸ್ಥಾನವನ್ನೂ ನೀಡದಿರುವುದು ದುರದೃಷ್ಟಕರ. ಇದು ಮಹಿಳಾ ಶಕ್ತಿಗೆ ಮಾಡಿದ ಘೋರ ಅನ್ಯಾಯ" ಎಂದು ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.

ಮಹಿಳೆಯರು ಕೇವಲ ಗೃಹಿಣಿಯರಲ್ಲ; ರಾಷ್ಟ್ರ ನಿರ್ಮಾತೃಗಳು ಎಂಬ ಮೋದಿ ಹೇಳಿಕೆಯನ್ನು ನೆನಪಿಸಿಕೊಂಡುವ ಅವರು, ಭಾರತದ ಪ್ರಗತಿಗೆ ಮಹಿಳೆಯರ ಸಬಲೀಕರಣ ಮುಖ್ಯ ಎಂದಿದ್ದರು ಎಂದು ಲೇವಡಿ ಮಾಡಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 25 ಮಂದಿ ಮಹಿಳಾ ಸದಸ್ಯರಿದ್ದಾರೆ. ಮೇಲ್ಮನೆಯ 78 ಸದಸ್ಯರ ಪೈಕಿ ನಾಲ್ವರು ಮಹಿಳೆಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News