ಎಸ್‌ವೈಎಸ್ 30ನೇ ವರ್ಷಾಚರಣೆ ಸಮಿತಿ ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಇಸ್ಮಾಯಿಲ್ ತಂಙಳ್ ಉಜಿರೆ ಆಯ್ಕೆ

Update: 2022-08-10 16:32 GMT
ಇಸ್ಮಾಯಿಲ್ ತಂಙಳ್

ಮಂಗಳೂರು, ಆ.10: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘವು (ಎಸ್‌ವೈಎಸ್) ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿದ್ದು, 2022ನೇ ವರ್ಷವನ್ನು  ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಮೂವತ್ತನೇ ವಾರ್ಷಿಕೋತ್ಸವವಾಗಿ ಆಚರಿಸಲು ನಿರ್ಧರಿಸಲಾಗಿದೆ.

ವರ್ಷಾಚರಣೆ ಸಮಿತಿಗೆ ‘pearl body' ಎಂದು ಹೆಸರಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಸಯ್ಯಿದ್ ಇಸ್ಮಾಯಿಲ್ ತಂಳ್ ಮದನಿ ಅಲ್‌ ಹಾದಿ ಉಜಿರೆ ಹಾಗೂ ಪ್ರಧಾನ ಸಂಚಾಲಕರಾಗಿ ಎಸ್‌ವೈಎಸ್ ರಾಜ್ಯಾಧ್ಯಕ್ಷರೂ ಆಗಿರುವ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರನ್ನು ಆಯ್ಕೆ ಮಾಡಲಾಗಿದೆ.

ವಿವಿಧ ಇಲಾಖೆಗಳ ಸಂಚಾಲಕರಾಗಿ, ಜಿಎಂ ಕಾಮಿಲ್ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ, ಸಯ್ಯಿದ್ ಜಾಫರ್ ಸಖಾಫಿ ತಂಳ್ ಕೋಟೇಶ್ವರ, ಅಬ್ದುಲ್ ಹಕೀಂ ಕೊಡ್ಲಿಪೇಟೆ, ಎಂ.ವೈ. ಅಬ್ದುಲ್ ಹಫೀಲ್ ಸಅದಿ ಕೊಳಕೇರಿ, ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲ್, ಪಿ.ಎ. ಬಶೀರ್ ಸಅದಿ ಬೆಂಗಳೂರು, ಬಿಜಿ ಹನೀಫ್ ಹಾಜಿ ಉಳ್ಳಾಲ್, ಹಾಜಿ ನವಾಝ್ ಅಹ್ಮದ್ ಬಳ್ಳಾರಿ, ಅಬ್ದುಲ್ ಹಮೀದ್ ಬಜಪೆ, ಖಾಸಿಂ ಪದ್ಮುಂಜೆ, ಇಕ್ಬಾಲ್ ಬಪ್ಪಳಿಗೆ, ಸಿಎಂ ಹಂಝ ನೆಲ್ಲಿಹುದಿಕೇರಿ, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಕೆ.ಎಸ್. ಅಬೂಬಕರ್ ಸಅದಿ ಮಜೂರು, ಕೆ.ಎಚ್. ಇಸ್ಮಾಯಿಲ್ ಸಅದಿ ಕಿನ್ಯ, ಕೆಎಂ ಅಬೂಬಕರ್ ಸಿದ್ದೀಕ್‌ಖ್ ಮೋಂಟುಗೋಳಿ, ಎಂ.ಬಿ.ಎಂ.ಸಾದಿಖ್ ಮಲೆಬೆಟ್ಟು, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯಾ, ಇಬ್ರಾಹಿಂ ಖಲೀಲ್ ಮಾಲಿಕಿ, ವಿ.ಪಿ.ಮೊಯ್ದೀನ್ ಪೊನ್ನತ್‌ಮೊಟ್ಟೆ, ಶಾಹುಲ್ ಹಮೀದ್ ಮುಸ್ಲಿಯಾರ್ ನಗರ, ಮನ್ಸೂರ್ ಅಲಿ ಕೋಟಗದ್ದೆ ಹಾಗೂ ಸಂಘಟನಾ ಪ್ರತಿನಿಧಿಗಳಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಕೆಸಿಎಫ್ ಇಂಟರ್‌ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಡಾ. ಶೇಖ್ ಬಾವಾ ಹಾಜಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಆಯ್ಕೆಯಾಗಿದ್ದಾರೆ.

ಸಲಹಾ ಸಮಿತಿ ಸದಸ್ಯರಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಕೂರತ್ ತಂಳ್, ಕೆಪಿ ಹುಸೈನ್ ಸಅದಿ ಕೆಸಿ ರೋಡ್, ಸಯ್ಯಿದ್ ಜಲಾಲುದ್ದೀನ್ ಮದನಿ ತಂಳ್ ಮಲ್ಜ, ಪಾತೂರು ಮುಹಮ್ಮದ್ ಫೈಝಿ ಮುಟ್ಟಂ, ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ, ಅಬೂಸುಫ್ಯಾನ್ ಮದನಿ, ಯು.ಕೆ.ಮುಹಮ್ಮದ್ ಸಅದಿ ವಳವೂರು, ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಪಿ.ಕೆ.ಮುಹಮ್ಮದ್ ಮದನಿ ಅಳಕೆ, ಡಿಕೆ ಉಮರ್ ಸಖಾಫಿ ಕಂಬಳಬೆಟ್ಟು, ಡಾ.ಶೇಖ್‌ ಬಾವ ಹಾಜಿ ಮಂಗಳೂರು, ಹಾಜಿ ಬಿ.ಎಂ.ಮುಮ್ತಾಝ್ ಅಲಿ ಕೃಷ್ಣಾಪುರ ಆಯ್ಕೆಯಾಗಿದ್ದಾರೆ.

ಒಂದು ವರ್ಷದ ಮೂವತ್ತು ಅಂಶ ಕಾರ್ಯಕ್ರಮಗಳನ್ನು ಅಂತಿಮಗೊಳಿಸಲಾಗಿದೆ. ೨೦೨೩ರ ಜನವರಿ ೨೪ ರಂದು ಬೆಂಗಳೂರಿನಲ್ಲಿ ಉದ್ಘಾಟನಾ ಹಾಗೂ ೨೦೨೪ ಜನವರಿ ೨೪ರಂದು ಮಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News