ಉಡುಪಿ ಜಿಲ್ಲೆಯ ವಿವಿಧೆಡೆ ಮೀನುಗಾರರಿಂದ ಸಾಮೂಹಿಕ ಸಮುದ್ರಪೂಜೆ

Update: 2022-08-12 15:18 GMT

ಮಲ್ಪೆ: ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಶುಕ್ರವಾರ ಮೀನುಗಾರರಿಂದ ಸಾಮೂಹಿಕ ಸಮುದ್ರಪೂಜೆ ಮಲ್ಪೆ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಜರಗಿತು.

ಮೀನುಗಾರರು ಬೆಳಗ್ಗೆ ವಡಭಾಂಡೇಶ್ವರದ ಬಲರಾಮ ಮತ್ತು ಬೊಬ್ಬರ್ಯ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಶೋಭಾಯಾತ್ರೆಯ ಮೂಲಕ ಸಮುದ್ರ ಕಿನಾರೆಗೆ ತೆರಳಿ, ಸಾಂಪ್ರದಾಯಿಕ ಪೂಜಾ ವಿಧಿವಿಧಾನ ಗಳನ್ನು ನೆರವೇರಿಸಿ ಸುಗಮ ಮೀನುಗಾರಿಕಾ ಋತುವಿಗಾಗಿ ಪ್ರಾರ್ಥಿಸಿದರು.

ಮುಂಬರುವ ದಿನಗಳಲ್ಲಿ ಮೀನುಗಾರಿಕೆಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗದೇ, ಹೇರಳ ಮತ್ಸ್ಯಸಂಪತ್ತು ಬೇಟೆಯ ಜೊತೆಗೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ಯಾವುದೇ ಅವಘಡಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸದಂತೆ, ಮೀನುಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಬಾರದೆ ಪರಸ್ಪರ ಐಕ್ಯತೆ, ಸೌಹಾರ್ದತೆಯಿಂದ ಒಗ್ಗಟ್ಟಾಗಿ ಮೀನುಗಾರಿಕೆಯನ್ನು ನಡೆಸುವಂತೆ ಗಂಗಾಮಾತೆ ಅನುಗ್ರಹವನ್ನು ಕೋರುವ  ಪ್ರಾರ್ಥನೆಯೊಂದಿಗೆ ಹಾಲು, ಸೀಯಾಳ, ಫಲಪುಷ್ಪವನ್ನು ಸಮುದ್ರರಾಜನಿಗೆ ಅರ್ಪಿಸಲಾಯಿತು. 

ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಬಾಲಕೃಷ್ಣ ತಂತ್ರಿ ಹಾಗೂ ಶ್ರೀನಿವಾಸ್ ಭಟ್ ಪೌರೋಹಿತ್ಯದಲ್ಲಿ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಮೀನುಗಾರರೆಲ್ಲರೂ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಪೂಜೆಯನ್ನು ನಡೆಸಿ ಎಲ್ಲವನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೀನು ಮಾರಾಟ ಫೆಡರೇಶನ್ನ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ, ಕಾಂಚನ್ ಹುಂಡೈ ಮಾಲಕ ಪ್ರಸಾದರಾಜ್ ಕಾಂಚನ್, ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಉಪಾಧ್ಯಕ್ಷ ನಾಗರಾಜ್ ಬಿ. ಕುಂದರ್, ರಮೇಶ್ ಕೋಟ್ಯಾನ್, ನಾಗರಾಜ್ ಸುವರ್ಣ, ರವಿ ಸಾಲ್ಯಾನ್, ರಾಘವ ಜಿ.ಕೆ., ರಮೇಶ್ ಎಸ್. ಕುಂದರ್, ಕಾರ್ಯದರ್ಶಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿಗಳಾದ ಕಿಶೋರ್‌ ಕುಮಾರ್, ಧನಂಜಯ್ ಕಾಂಚನ್, ಕೋಶಾಕಾರಿ ಕರುಣಾಕರ ಸಾಲ್ಯಾನ್, ಮೀನುಗಾರ ಮುಖಂಡರಾದ ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ಗುಂಡು ಬಿ. ಅಮೀನ್, ಹಿರಿಯಣ್ಣ ಟಿ. ಕಿದಿಯೂರು, ವಿವಿಧ ಮೀನುಗಾರಿಕಾ ಸಂಘಟನೆಗಳ ರಾಮಚಂದ್ರ ಕುಂದರ್, ಸುಭಾಷ್ ಎಸ್. ಮೆಂಡನ್, ಸತೀಶ್ ಕುಂದರ್, ಕೇಶವ ಕೋಟ್ಯಾನ್, ಗೋಪಾಲ ಅರ್.ಕೆ, ದಯಾನಂದ ಕುಂದರ್, ಸೋಮನಾಥ್ ಕಾಂಚನ್, ಸುಂದರ ಪಿ. ಸಾಲ್ಯಾನ್, ಗೋವರ್ಧನ್ ಪುತ್ರನ್, ಜಗನ್ನಾಥ ಅಮೀನ್ , ಮಿಥುನ್ ಕುಂದರ್, ಪಾಂಡುರಂಗ ಕೊಟ್ಯಾನ್, ಕೃಷ್ಣ ಜಿ. ಕೊಟ್ಯಾನ್, ಪುರಂದರ ತಿಂಗಳಾಯ, ಸುಮಿತ್ರ ಮುಂತಾದವರು ಉಪಸ್ಥಿತರಿದ್ದರು.

ಕಾಪು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳ ಮೀನುಗಾರರು ಸಹ ಇಂದು ಸಮುದ್ರ ಪೂಜೆಯ ಮೂಲಕ ಮೀನು ಬೇಟೆಗಾಗಿ ಸಮುದ್ರಕ್ಕಿಳಿಯಲು ಸಜ್ಜಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News