ಕಲ್ಲಾಪು: ತರಕಾರಿ ಮತ್ತು ಹಣ್ಣು ಹಂಪಲು ವರ್ತಕರ ಸಂಘ ಅಸ್ತಿತ್ವಕ್ಕೆ

Update: 2022-08-12 15:46 GMT
ಫೈರೋಝ್ ಫರಂಗಿಪೇಟೆ 

ಮಂಗಳೂರು, ಆ.12: ಕಲ್ಲಾಪು ಗ್ಲೋಬಲ್ ಕಮರ್ಷಿಯಲ್ ಸೆಂಟರ್ ನಲ್ಲಿ ಅದರ ವ್ಯವಸ್ಥಾಪಕ ನಿರ್ದೇಶಕ ಅಬೂಬಕ್ಕರ್ ಸಿದ್ದಿಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 'ತರಕಾರಿ ಮತ್ತು ಹಣ್ಣು ಹಂಪಲು ವರ್ತಕರ ಸಂಘ' ಹೊಸ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಫೈರೋಝ್ ಇ.ಬಿ.ಆರ್. ಫರಂಗಿಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಎ.ಎ. ಪೇರಿಮಾರ್, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಆರ್.ಕೆ., ಪೀಟರ್ ಡಿಸೋಜ, ಕೋಶಾಧಿಕಾರಿಯಾಗಿ ಹಾಜಿ ಇಸಾಕ್ ಎಸ್.ಎಫ್., ಜೊತೆ ಕಾರ್ಯದರ್ಶಿಯಾಗಿ ಕಮಲ್ ವಲಚ್ಚಿಲ್ ಆವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮಂಗಳೂರು ಮರ್ಚೆಂಟ್ಸ್ ಅಸೋಸಿಯೇಷನ್ (ರಿ) ಇದರ ಉಪಾಧ್ಯಕ್ಷ ಅಹ್ಮದ್ ಭಾವ, ಸಭೆಯ ಅಧ್ಯಕ್ಷತೆ ವಹಿಸಿದ ಅಬೂಬಕ್ಕರ್ ಸಿದ್ದಿಕ್ ಅವರು ಮಾತನಾಡಿ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಸ್ಥೆಯ ಆಡಳಿತ ಪಾಲುದಾರ ಅಬ್ದುಲ್ ಹಮೀದ್ ಅಮ್ಮಿ ಮಾರಿಪಲ್ಲ, ಬಿ.ಎಚ್.ಹಮ್ಮಿದ್, ಎಂ.ಸಿ.ಹುಸೇನ್, ಹನೀಫ್ ಇ.ಬಿ.ಆರ್‌., ಫೆಲ್ಲಿಕ್ಸ್ ಪಿರೇರಾ, ಕಲಂ ಸಿ.ಆರ್‌. ಉಪಸ್ಥಿತರಿದ್ದರು. ರಫೀಕ್ ಪೇರಿಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News