ಕೆಮ್ಮಾರ ಶರೀಅತ್ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ

Update: 2022-08-13 15:20 GMT

ಉಪ್ಪಿನಂಗಡಿ : ಕೆಮ್ಮಾರದಲ್ಲಿ ಶಂಸುಲ್ ಉಲಮಾ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಮುನ್ನಡೆಯುತ್ತಿರುವ ವಿಮನ್ಸ್ ಶರೀಅತ್ ಹಾಗೂ ದಅವಾ ಕಾಲೇಜಿನಲ್ಲಿ ಸ್ವಾತಂತ್ರ್ಯ ಅಮೃತೋತ್ಸವ ಆಚರಣೆ ಅಭಿಯಾನ ಹಾಗೂ ಸಮಸ್ತದ ಹಿರಿಯ ಚೇತನ ಶೃಂಗೇರಿ ನಾರ್ವೆ ಮಹ್ಮೂದ್ ಮುಸ್ಲಿಯಾರ್‌ರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸುನ್ನಿ ಯುವ ಜನ ಸಂಘದ ಜಿಲ್ಲಾಧ್ಯಕ್ಷ ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿ ದೇಶದ ಸ್ವಾತಂತ್ರ್ಯ ಅಮೃತೋತ್ಸವದ ಈ ಸಂಭ್ರಮವು ಕೇವಲ ತೋರಿಕೆ ಮಾತ್ರವಾಗಿರದೇ ಹೃದಯದಿಂದ ದೇಶದ ಅಭಿಮಾನ ಪ್ರಕಟವಾಗಲು ಉಪಯುಕ್ತವಾಗ ಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಎಸ್‌ಬಿ ದಾರಿಮಿ ಮಾತನಾಡಿ ಶಿಕ್ಷಣ ಕ್ರಾಂತಿಯಿಂದಲೇ ದೇಶದ ಪ್ರಗತಿ, ಮೌಲ್ಯಯುತ ಶಿಕ್ಷಣವೂ ಇಂದಿನ ಅಗತ್ಯವಾಗಿದೆ. ಅದಕ್ಕೆ ಪ್ರಾಮುಖ್ಯತೆ ಕೊಡುವ ನಿಟ್ಟಿನಲ್ಲಿ ಶರೀಅತ್ ಕಾಲೇಜ್‌ಗಳು ಕಾರ್ಯಚರಿಸುತ್ತಿದ್ದು, ಉದಾರಿಗಳ ಸಹಕಾರದಿಂದ ಸಂಸ್ಥೆಯಲ್ಲಿ ಮಹಿಳೆಯರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಮಂಗಳ ನಗರ ದಾರುಸ್ಸಲಾಂ ಸಂಸ್ಥೆಯ ಅಧ್ಯಕ್ಷ ತಬೂಕ್ ದಾರಿಮಿ ಮಾತನಾಡಿದರು. ಸಂಸ್ಥೆಯ ಮ್ಯಾನೇಜರ್ ಕೆಎಂಎ ಕೊಡುಂಗೈ ಪ್ರಾಸ್ತಾವಿಕವಾಗಿ ಮಾತನಾಡಿದರು.

ದಾರುಲ್ ಹಸನಿಯ್ಯಾ ಸಂಸ್ಥೆಯ ಕರೀಂ ದಾರಿಮಿ ಬೊಳ್ವಾರು, ಅನ್ವರ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ರಝಾಕ್ ದಾರಿಮಿ ತಿಂಗಳಾಡಿ ಬಾ ಅಸನಿ ಉಸ್ತಾದ್ ಕೆಮ್ಮಾರ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News