‘ಮಣ್ಣು ಉಳಿಸಿ’ ಜನ ಜಾಗೃತಿಗಾಗಿ ಜಾಥಾ

Update: 2022-08-14 16:21 GMT

ಮಂಗಳೂರು : ವಿನಯ ಕೃಷಿ ಬೆಳೆಗಾರರ ಸಂಘ, ಲಯನ್ಸ್ ಕ್ಲಬ್, ರೆಡ್ ಕ್ರಾಸ್, ಐಎಂಎ ಮಂಗಳೂರು ಘಟಕ, ಕನ್ನಡ ಕಟ್ಟೆ ಮಂಗಳೂರು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಸಹಿತ ೧೮ಕ್ಕೂ ಅಧಿಕ ಸಂಘಟನೆಗಳ ಸಹಭಾಗಿತ್ವ ದಲ್ಲಿ ರವಿವಾರ ನಗರದಲ್ಲಿ ‘ಮಣ್ಣು ಉಳಿಸಿ’ ಜನ ಜಾಗೃತಿಗಾಗಿ ಜಾಥಾ ನಡೆಯಿತು.

ನಗರದ ಮಂಗಳ ಕ್ರೀಡಾಂಗಣದಿಂದ ಆರಂಭಗೊಂಡ ಬೈಸಿಕಲ್ ಜಾಥಾ ಲೇಡಿಹಿಲ್, ಪಿವಿಎಸ್, ಜ್ಯೋತಿ, ಬೆಂದೂರ್‌ವೆಲ್, ಕಂಕನಾಡಿ, ವೆಲೆನ್ಸಿಯಾ, ಮೋರ್ಗನ್‌ಗೇಟ್, ಮಂಗಳಾದೇವಿ, ಪಾಂಡೇಶ್ವರ, ಕೆ.ಎಸ್.ರಾವ್ ರಸ್ತೆಯಾಗಿ ಮಂಗಳಾ ಕ್ರೀಡಾಂಗಣದಲ್ಲಿ ಸಮಾಪ್ತಿಗೊಂಡಿತು.

ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪುಟ್ಟಣ್ಣ  ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್, ಡಾ.ಜೂಲಿಯನ್ ಸಲ್ದಾನ, ಶಾಂತಾರಾಮ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News