ಮಿತ್ತೂರ್ ಕೆಜಿಎನ್ ನಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

Update: 2022-08-15 07:05 GMT

ಪುತ್ತೂರು: ಮಾಣಿ ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಣೆ ನಡೆಯಿತು.

ದಾರುಲ್ ಇರ್ಶಾದ್ ಸಂಸ್ಥೆಯ ಅಧ್ಯಕ್ಷ, ಕರ್ನಾಟಕ‌ ರಾಜ್ಯ ಸುನ್ನಿ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ, ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಜಮಾಅತ್ ಹಾಗೂ ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಧ್ವಜಾರೋಹಣ ಮಾಡಿದರು. 
ದಾರುಲ್ ಇರ್ಶಾದ್ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ, ಕೆಜಿಎನ್ ದ‌ಅವಾ ಕಾಲೇಜು ಉಪನ್ಯಾಸಕರಾದ  ಹುಸೈನ್ ಮುಈನಿ ಅಲ್ ಅಹ್ಸನಿ ಮಾರ್ನಾಡ್ , ಸ್ವಾದಿಖ್ ಮು‌ಈನಿ ಅಸ್ಸಖಾಫಿ ಗಡಿಯಾರ್ ಸಂದೇಶ ಭಾಷಣ ಮಾಡಿದರು. 

ಕೆಜಿಎನ್ ಜೂನಿಯರ್ ದ‌ಅವಾ ಮುಖ್ಯೋಪಾಧ್ಯಾಯ ಅಬ್ದುರ್ರಝಾಖ್ ಮುಸ್ಲಿಯಾರ್ ನೀರಕಟ್ಟೆ, ನೌರತುಲ್ ಮದೀನಾ ಇಂಗ್ಲೀಷ್ ಮೀಡಿಯಂ ಶಾಲೆಯ ಅಡ್ಮಿನಿಸ್ಟ್ರೇಟರ್ ಬದ್ರುದ್ದೀನ್ ಅಹ್ಸನಿ ಬನ್ನೂರು, ದ‌ಅವಾ ವಿಭಾಗದ ಉಪನ್ಯಾಸಕರಾದ ಹನೀಫ್ ಅಝ್ಹರಿ, ಮುನವ್ವಿರ್ ಅದನಿ, ಹಾಫಿಳ್ ಮಸ್‌ಊದ್ ಹಿಮಮಿ, ಅಬ್ದುಸ್ಸಮದ್ ಮು‌ಈನಿ, ಶಾಹುಲ್ ಹಮೀದ್ ಮುಈನಿ, ಜೂನಿಯರ್ ದ‌ಅವಾ ಮೇನೇಜರ್ ಹಾರಿಸ್ ಮು‌ಈನಿ ಅಸ್ಸಖಾಫಿ, ಕೆಜಿಎನ್ ಕ್ಯಾಂಪಸ್ ಉರ್ದು ವಿಭಾಗದ ಮುಖ್ಯಸ್ಥ ಲತೀಫ್ ‌ಸ‌ಅದಿ,  ನೌರತುಲ್ ಮದೀನಾ ಇಂಗ್ಲೀಷ್ ಮೀಡಿಯಂ ಮದ್ರಸ ಕೆಜಿ ವಿಭಾಗ ಮುಖ್ಯೋಪಾಧ್ಯಾಯ ಅಹ್ಮದ್ ಕಬೀರ್ ಸಖಾಫಿ ಮಾಲಾಡಿ,  ಕ್ಯಾಂಪಸ್ ನಿರ್ವಾಹಕ ಮುಸ್ತಫ ಮುಈನೀ ಅಸ್ಸಖಾಫಿ,  ಕೆಜಿಎನ್ ಪಿಯು ಕಾಲೇಜು ಪ್ರಾಂಶುಪಾಲ ಮುಹಮ್ಮದ್ ಫಾರೂಕ್ ಕೊಡಿಪ್ಪಾಡಿ, ನೌರತ್ ಇಂಗ್ಲೀಷ್ ಮೀಡಿಯಂ ಶಾಲೆಯ ಉಪ ಮುಖ್ಯೋಪಾಧ್ಯಾಯ ಅಬ್ದುರ್ರಹ್ಮಾನ್ ಮುಈನಿ ಕಕ್ಕೆಪದವು, ಮಿತ್ತೂರು ಬದ್ರಿಯಾ ಜುಮಾ ಮಸೀದಿ ಮು‌ಅದ್ಸಿನ್ ಅಬ್ದುರ್ರಹ್ಮಾನ್ ಅನ್ವರಿ ಮುಂತಾದವರು ಉಪಸ್ಥಿತರಿದ್ದರು.

ಕೆಜಿಎನ್ ಮಹಿಳಾ ಕಾಲೇಜು ಅಡ್ಮಿನಿಸ್ಟ್ರೇಟರ್ ಎ.ಕೆ.ನಂದಾವರ ಕಾರ್ಯಕ್ರಮ ನಿರೂಪಿಸಿ, ದಾರುಲ್ ಇರ್ಶಾದ್ ಬಾಲಕ‌ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶ್ರಫ್ ವಂದಿಸಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News