ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನೊರ್ಸ್ ಫೋರಂ ಮುಲ್ಕಿ ವತಿಯಿಂದ ರಕ್ತ ದಾನ ಶಿಬಿರ

Update: 2022-08-15 17:32 GMT

ಮುಲ್ಕಿ, ಅ. 15: ಮುಲ್ಕಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಮ್ ಇದರ ವತಿಯಿಂದ ಭಾರತದ ಸ್ವಾತಂತ್ರೋತ್ಸವದ ಅಮೃತಮಹೋತ್ಸವದ ಅಂಗವಾಗಿ ಕಾರ್ನಾಡು ಮದ್ರಸತನ್ನೂರಿಯ ವಠಾರದಲ್ಲಿ, ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಂಗಳೂರು ಇದರ ಸಹಯೋಗದೊಂದಿಗೆ ಸೋಮವಾರ ರಕ್ತದಾನ ಶಿಬಿರ ನಡೆಯಿತು.

ಮುಬೀನ್ ಕೊಲ್ನಾಡ್ ಅವರು ದುವಾ ನೆರವೇರಿಸಿದರು. ಮುಲ್ಕಿ ಶಾಫಿ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಬಿ.ಮ್. ಲಿಯಾಖತ್ ಆಲಿ ಅವರು ಸ್ವಾಗತಿಸಿದರು. ಮುಲ್ಕಿ ಟೌನ್ ಪಂಚಾಯತ್‌ ಮುಖ್ಯಾಧಿಕಾರಿಯಾದ ಪಿ. ಚಂದ್ರ ಪೂಜಾರಿ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮುಲ್ಕಿ ಸಮುದಾಯ ಅರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಕೃಷ್ಣ ಅವರು ಶಿಬಿರವನ್ನು ಉದ್ಘಾಟಿಸಿದರು. ರಕ್ತದಾನ ಶಿಬಿರದಲ್ಲಿ ಸುಮಾರು 122 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ರಕ್ತದಾನದ ಶಿಬಿರದ ಸಮಾರೋಪ ಸಮಾರಂಭ ಮಧ್ಯಾಹ್ನ ನೂರಾನಿಯ ಮದ್ರಸ ವಠಾರದಲ್ಲಿ ನಡೆಯಿತು.
ಸಮಾರೋಪ ಸಮಾರಂದ ಅಧ್ಯಕ್ಷತೆಯನ್ನು ಬ್ಲಡ್ ಡೋನರ್ಸ್ ಫೋರಮ್ ಮುಲ್ಕಿ ಇದರ ಅಧ್ಯಕ್ಷರಾದ ಬಿ.ಮ್. ಲಿಯಾಖತ್ ಆಲಿ ಅವರು  ವಹಿಸಿದ್ದರು.

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ಪ್ರಧಾನ ಕಾರ್ಯದರ್ಶಿ ಕೆ.ಎ. ಇಬ್ರಾಹಿಂ ಅವರು ದಕ್ಷಿಣ ಕನ್ನಡ ಜಿಲ್ಲೆಯ ರಕ್ತದ ಅಭಾವ ಕಂಡು ದಕ್ಷಿಣ ಕನ್ನಡ ಪಾಪ್ಯುಲರ್ ಫ್ರಂಟ್ ಸುಮಾರು ಹತ್ತು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರ ಏರ್ಪಡಿಸುತ್ತಿರುವ ಹಾಉ ಇಂತಹ ಶಿಬಿರಗಳ ಅನಿವಾರ್ಯತೆಯ ಕುರಿತು ಪ್ರಾಸ್ತಾವಿಕ ಭಾಷಣದಲ್ಲಿ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಮುಲ್ಕಿ ಹಾಗೂ ಕ್ಯಾಥೊಲಿಕ್ ಚರ್ಚ್‌ ಧರ್ಮಗುರುಗಳಾದ ರೆ. ಫಾ‌. ಸಿಲ್ವೆಸ್ಟರ್ ಡಿಕೋಸ್ತ ಮಾತನಾಡಿದರು.

ಕಸ್ತೂರ್ಬಾ ಮೆಡಿಕಲ್ ಕಾಲೇಜು ಮುಖ್ಯವೇದ್ಯಾಧಿಕಾರಿ ಡಾ. ಲಕ್ಷ್ಮಣ್ ಭಾರತಿ  ಮಂಗಳೂರು ಅವರು ರಕ್ತದಾನ ಶಿಬಿರದ ಮುಂದಾಳತ್ವವನ್ನು ವಹಿಸಿದ್ದರು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಸದಸ್ಯರಾದ ಉನೈಸ್  ಮುಲ್ಕಿ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News