ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಯೂನಿಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2022-08-15 18:14 GMT

ಮುಲ್ಕಿ, ಆ.15: ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಯೂನಿಟ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮವು ಬೊಳ್ಳೂರು ಶಂಸುಲ್ ಉಲಮಾ ಮೆಮೋರಿಯಲ್ ಪೌಂಡೇಶನ್ ಆವರಣದಲ್ಲಿ ಸೋಮವಾರ ನಡೆಸಲಾಯಿತು.

ರಾಷ್ಟ್ರಧ್ವಜಾರೋಹಣವನ್ನು‌ ಶೈಖುನಾ ಅಲ್ಹಾಜ್  ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ಅವರು ಗೈದರು.

ಜಿ.ಎಮ್ ಮುಹಮ್ಮದ್ ಹನೀಫ್ ದಾರಿಮಿ ಮುಖ್ಯ ಪ್ರಭಾಷಣಗೈದು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಯರನ್ನು ಸದಾ ನೆನಪಿಸುವಂತೆ ಕರೆ ನೀಡಿದರು.

ಬಳಿಕ ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಅತ್ ಕಾಲೇಜು ಬೊಳ್ಳೂರು ಇದರ ವಿದ್ಯಾರ್ಥಿನಿಯರು ರಚಿಸಿದ "ಭಾರತ ಸ್ವಾತಂತ್ರ್ಯ" ಎಂಬ ಕೈಮಾಸಿಕ ಕಿರು ಕೃತಿ ಬಿಡುಗಡೆಗೊಳಿಸಲಾಯಿತು. 

ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಅಧ್ಯಕ್ಷ ಶಂಸುದ್ದೀನ ರೈಲ್ವೇಗೇಟ್, ಬೊಳ್ಳೂರು ಎಸ್ಕೆಎಸ್ಸೆಸ್ಸೆಫ್  ಅಧ್ಯಕ್ಷ ಬಾಯಿಸ್, ಎಸ್.ಯು.ಎಮ್.ಎಫ್ ಅಧ್ಯಕ್ಷ ಬಿ.ಇ ಮುಹಮ್ಮದ್, ಬೊಳ್ಳೂರು ಮಸೀದಿ ಉಪಾದ್ಯಕ್ಷ ಟಿ.ಎಚ್.ಎ ರೆಹಮಾನ್, ಕಾರ್ಯದರ್ಶಿ ಬಿ.ಎಮ್. ಸುಲೈಮಾನ್, ಜೊತೆ ಕಾರ್ಯದರ್ಶಿ ಅಬ್ದುಲ್ ಹಮೀದ್, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕಾದರ್ ಹಾಗೂ ಅಬ್ದುಲ್ ಅಝೀಝ್, ಬೊಳ್ಳೂರು ಮುದರ್ರೀಸ್ ಆರೀಫ್ ಬಾಖಾವಿ, ಸದರ್ ಮುಅಲ್ಲಿಮ್ ನಾಸಿರ್ ಮುಸ್ಲಿಯಾರ್, ರಿಯಾಝ್ ಪೈಝಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ತ್ವಯ್ಯಿಬ್ ಪೈಝಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News