×
Ad

ಫರಂಗಿಪೇಟೆ ಜುಮಾ‌ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2022-08-16 08:53 IST

ಬಂಟ್ವಾಳ : ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಇಸ್ಲಾಹುಲ್ ಮುಸ್ಲಿಮೀನ್ ಮದ್ರಸ ಫರಂಗಿಪೇಟೆ ಇದರ ವತಿಯಿಂದ ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. 

ಜುಮಾ ಮಸೀದಿ ಅಧ್ಯಕ್ಷ ಉಮರ್ ಫಾರೂಕ್ ಎಫ್. ದ್ವಜಾರೋಹಣ ನೆರೆವೇರಿಸಿ ಮಾತನಾಡಿದರು. ಖತೀಬ್ ಉಸ್ತಾದ್ ಅಬ್ಬಾಸ್ ದಾರಿಮಿ ದುಅ ನೆರವೇರಿಸಿದರು. 

ಇಸ್ಲಾಹುಲ್ ಮುಸ್ಲಿಮೀನ್ ಮದರಸಾ ಸದರ್ ಉಸ್ತಾದ್ ಇಸ್ಮಾಯೀಲ್ ಹನೀಫಿ ಸಜಿಪ ಸ್ವಾಗತ ಭಾಷಣ ಮಾಡಿದರು. ಮುಅಲ್ಲಿಮರಾದ ಶಾಫಿ ಅರ್ಶದಿ, ಆದಮ್ ಅಸ್ಲಮಿ, ಅಬ್ಬಾಸ್ ನುಜೂಮಿ ಹಾಗೂ ಮಸೀದಿ ಸದಸ್ಯರಾದ ಅಬ್ದುಲ್ ಮಜೀದ್, ಫಯಾಝ್, ಅಬೂಬಕ್ಕರ್, ನಸೀರ್, ಗಫೂರ್, ಮದರಸಾ ವಿದ್ಯಾರ್ಥಿಗಳು, ಊರಿನ ಪ್ರಮುಖರು   ಉಪಸ್ಥಿತರಿದ್ದರು. 

10ನೇ ತರಗತಿ ವಿದ್ಯಾರ್ಥಿಗಳಾದ ಅಬ್ದುಲ್ ಖಾದರ್ ಮತ್ತು ಅರ್ಫಾನ್ ಸ್ವಾತಂತ್ರ್ಯ ಪ್ರಬಂಧ ಮಂಡಿಸಿದರು. ಆದಮ್ ಅಸ್ಲಮಿ ಧನ್ಯವಾದದೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News