ದೇರಳಕಟ್ಟೆ: ಎಸ್ಕೆಎಸ್ಸೆಸ್ಸೆಫ್ ನಿಂದ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ

Update: 2022-08-16 06:53 GMT

ದೇರಳಕಟ್ಟೆ, ಆ.16: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ಸಮಿತಿ ವತಿಯಿಂದ 'ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ.. ಭಾರತದ ಪರಂಪರೆಯನ್ನು ಉಳಿಸೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ ಜರುಗಿತು.

ಎಸ್ಕೆಎಸ್ಸೆಸ್ಸೆಫ್  ದ.ಕ. ಜಿಲ್ಲಾ ವೆಸ್ಟ್ ಸಮಿತಿಯ ಅಧ್ಯಕ್ಷ ಅಸ್ಸೈಯದ್ ಅಮೀರ್ ತಂಙಳ್ ಅಲ್-ಬುಖಾರಿ ಕಿನ್ಯ  ದುಆಗೈದರು. ಅರಸ್ತಾನ ಅಲ್-ಮುಬಾರಕ್ ಜುಮಾ ಮಸ್ಜಿದ್ ಖತೀಬ್ ಶರೀಫ್ ಅಝ್ಹರಿ ಪಾಟ್ರಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ವಲಯಾಧ್ಯಕ್ಷ ಫಾರೂಖ್ ದಾರಿಮಿ ಗ್ರಾಮಚಾವಡಿ ಅಧ್ಯಕ್ಷತೆ ವಹಿಸಿದ್ದರು.

ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಜೊತೆ ಕಾರ್ಯದರ್ಶಿ ಅಬೂಬಕರ್ ರಿಯಾಝ್ ರಹ್ಮಾನಿ ಕಿನ್ಯ ಹಾಗೂ ದೇರಳಕಟ್ಟೆ ರೇಂಜ್ ಅಧ್ಯಕ್ಷ ಅಝೀಝ್ ಫೈಝಿ, ಮಂಗಳೂರು ತಾಲೂಕು ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಮುಹಮ್ಮದ್ ಮೋನು  ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಂಕರನಂದನ್ ಇನೋಳಿ ಸೌಹಾರ್ದ ಸಂದೇಶ ಮಾತುಗಳನ್ನಾಡಿದರು‌. ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ದೇರಳಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ಝುಲ್ಫಿಕರ್ ಪ್ರತಿಜ್ಞೆ ವಿಧಿ ಬೋಧಿಸಿದರು. ಜಾಮಿಯ ನೂರಿಯ್ಯಾ ಪಟ್ಟಿಕ್ಕಾಡ್ ಕಾಲೇಜು ವಿದ್ಯಾರ್ಥಿ ಯೂಸುಫ್ ಸವಾದ್ ಪರ್ಪುಂಜ ಭಾಷಣಗೈದರು.

ದೇರಳಕಟ್ಟೆ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಕಿನ್ಯ, ಸೈಯದ್ ಮದನಿ ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ಉಳ್ಳಾಲ, ಎ.ಎಂ.ಜೆ.ಎಂ. ಅರಸ್ತಾನ ಅಧ್ಯಕ್ಷ ಹಾಮದ್ ಅಲ್ತಾಫ್, ಕಿನ್ಯ ರೇಂಜ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ, ದೇರಳಕಟ್ಟೆ ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ವಲಯ ಕೋಶಾಧಿಕಾರಿ ಅಶ್ರಫ್ ಮಾರಾಠಿಮೂಲೆ, ಮಲಾರ್ ಕ್ಲಸ್ಟರ್ ಅಧ್ಯಕ್ಷ ಸಮದ್ ಕೆ.ಎಂ., ಸಮಸ್ತ ಇಸ್ಲಾಮಿಕ್ ಸೆಂಟರ್ ರಿಯಾದ್ ಸಮಿತಿ ಮುಖಂಡರಾದ ಅಝೀಝ್ ಮಂಜನಾಡಿ ಮತ್ತು ರಿಯಾಝ್ ಇನೋಳಿ, ಕುವೈತ್ ಎಸ್ಕೆಎಸ್ಸೆಸ್ಸೆಫ್ ಸಮಿತಿಯ ಉಪಾಧ್ಯಕ್ಷ ಇಕ್ಬಾಲ್ ಫೈಝಿ ಕಿನ್ಯ, ವಿಖಾಯ ಜಿಲ್ಲಾ ವೆಸ್ಟ್ ಸಮಿತಿ ಚೇರ್ ಮ್ಯಾನ್ ಶಮೀರ್ ಎಚ್.ಕಲ್ಲು, ಖಾಲಿದ್ ಬಿನ್ ವಲೀದ್ ಮಸ್ಜಿದ್  ಇಮಾಮ್ ಅಬ್ದುರ್ರಹ್ಮಾನ್ ಹನೀಫಿ ಕಕ್ಕಿಂಜೆ ಮೊದಲಾದವರು ಉಪಸ್ಥಿತರಿದ್ದರು.

ದೇರಳಕಟ್ಟೆ ವಲಯ ವರ್ಕಿಂಗ್ ಕಾರ್ಯದರ್ಶಿ ನೌಶಾದ್ ಮಲಾರ್ ಸ್ವಾಗತಿಸಿದರು. ಅಶ್ರಫ್ ಫೈಝಿ ಕೆ.ಎಂ. ವಂದಿಸಿದರು.

ಹನೀಫ್ ದಾರಿಮಿ ಗ್ರಾಮ ಚಾವಡಿ ಕಾರ್ಯಕ್ರಮ ನಿರೂಪಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ನೌಶಾದ್ ದೇರಳಕಟ್ಟೆ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News