×
Ad

ಕುದ್ರೋಳಿ: ಮುಸ್ಲಿಂ ಐಕ್ಯತಾ ವೇದಿಕೆಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ

Update: 2022-08-16 21:23 IST

ಮಂಗಳೂರು, ಆ.16: ಕುದ್ರೋಳಿ: ಮುಸ್ಲಿಂ ಐಕ್ಯತಾ ವೇದಿಕೆಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭ ಕುದ್ರೋಳಿಯ ಫಾತಿಮಾ ಇಸ್ಲಾಮಿಕ್ ಸೆಂಟರ್‌ನ ಎಂಟು ವಿದ್ಯಾರ್ಥಿಗಳನ್ನು ಹಾಗು ದ್ವಿತೀಯ ಪಿಯುಸಿಯ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಂಶುದ್ದೀನ್ ಎಚ್‌ಬಿಟಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದರು. ರಫೀಕ್ ಮಾಸ್ಟರ್ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಬಂದರ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು ಗಣೇಶ್ ಫ್ರೆಂಡ್ಸ್ ಸರ್ಕಲ್‌ನ ಮಾಜಿ ಅಧ್ಯಕ್ಷ ನಾರಾಯಣ ಕರ್ಕೇರ, ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಝೀಝ್ ಪಿ.ಪಿ., ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಯಾಸಿನ್, ಪ್ರಧಾನ ಕಾರ್ಯದರ್ಶಿ ಬಿ ಅಬೂಬಕ್ಕರ್ ಕುದ್ರೋಳಿ, ಖಜಾಂಚಿ ಮಕ್ಬೂಲ್ ಅಹ್ಮದ್. ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಝುಬೈರ್ ಉಪಸ್ಥಿತರಿದ್ದರು.
ಮುಹಮ್ಮದ್ ಹಾರಿಸ್ ಕಾರ್ಯಕ್ರಮ ನಿರೂಪಿಸಿದರು. ವಹಾಬ್ ಕುದ್ರೋಳಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News