ಪಂಜಿಮೊಗರು; ಅಲ್‌ ಮಸ್ಜಿದುಲ್ ರಿಫಾಯಿಯ್ಯಾ ವತಿಯಿಂದ ಸ್ವಾತಂತ್ರ್ಯೋತ್ಸ

Update: 2022-08-16 16:25 GMT

ಪಂಜಿಮೊಗರು; ಅಲ್‌ಮಸ್ಜಿದುಲ್ ರಿಫಾಯಿಯ್ಯಾ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿಯ ಗೌರವಾಧ್ಯಕ್ಷ ಅಬ್ಬುಲ್ಲಾ ನೆರವೇರಿಸಿದರು. ಮಸೀದಿಯ ಅಧ್ಯಕ್ಷ ಅಹ್ಮದ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕೆಎಂಜೆಎಂ ಖತೀಬ್ ಇಕ್ರಮುಲ್ಲಾ ಸಖಾಫಿ, ಅಧ್ಯಕ್ಷ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿ ಶೇಕಬ್ಬ, ಸ್ಥಳೀಯ ಕಾರ್ಪೊರೇಟರ್ ಅನಿಲ್ ಕುಮಾರ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಭಾಗವಹಿಸಿದ್ದರು.

ಅಲ್‌ಮಸ್ಜಿದುಲ್ ರಿಫಾಯಿಯ್ಯಾ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಸ್ವಾಗತಿಸಿದರು. ಸವಾದ್ ಪಂಜಿಮೊಗರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News