ದ.ಕ.ಜಿಲ್ಲೆ: ಕೋವಿಡ್‌ಗೆ ವೃದ್ಧ ಬಲಿ
Update: 2022-08-19 22:55 IST
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್‌ಗೆ 94 ವರ್ಷ ಪ್ರಾಯದ ಸುಳ್ಯ ಮೂಲದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 1859ಕ್ಕೇರಿದೆ.
ಶುಕ್ರವಾರ 20 ಕೋವಿಡ್ ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,36,499ಕ್ಕೇರಿದೆ. ಅಲ್ಲದೆ ಗುಣಮುಖರಾದವರ ಸಂಖ್ಯೆ 1,34,572 ಕ್ಕೇರಿದೆ ಎಂದು ದ.ಕ.ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.