ನಿಗೂಢ ಆಳಸಮುದ್ರ ಕುಳಿ ಪತ್ತೆ: ಡೈನೋಸಾರ್ ಸಂತತಿ ನಾಶಕ್ಕೆ ಇದುವೇ ಕಾರಣ?

Update: 2022-08-20 16:36 GMT
photo : the print

ನ್ಯೂಯಾರ್ಕ್, ಆ.20: 66 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಭೌಗೋಳಿಕ ಘಟನೆಯಲ್ಲಿ ಬೃಹತ್ ಕ್ಷುದ್ರಗ್ರಹವೊಂದು ನಮ್ಮ ಗ್ರಹಕ್ಕೆ ಅಪ್ಪಳಿಸಿ ಇಲ್ಲಿ ಡೈನೋಸಾರ್ ಸಹಿತ ಸಾಮೂಹಿಕ ಅಳಿವಿಗೆ ಕಾರಣವಾದ ಘಟನೆಗಳ ಸರಪಳಿಯನ್ನು ಪ್ರಚೋದಿಸಿದೆ ಎಂಬುದನ್ನು ದೃಢಪಡಿಸುವ ಪುರಾವೆಗಳು ಲಭ್ಯವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಒಂದು ಹೊಸ ಅಧ್ಯಯನವು ಈ ಕ್ಷುದ್ರಗ್ರಹದ ಪಥದ ಬಗ್ಗೆ ಬೆಳಕು ಚೆಲ್ಲುತ್ತದೆ. ಇದರ ಪ್ರಭಾವವು ಅದರ ಕೆಳಗಿರುವ ಗ್ರಹಗಳ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ನೆರವಾಗುತ್ತದೆ. ಈ ಕ್ಷುದ್ರಗ್ರಹದ ಪ್ರಭಾವದ ವ್ಯಾಪ್ತಿಯು ಭೂಮಿಯ ಮೇಲಿನ ನಿವಾಸಿಗಳಿಗೆ ಕೆಟ್ಟ ಸಂಭವನೀಯ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಸಂಶೋಧನೆ ಸೂಚಿಸುತ್ತದೆ.

ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದೊಡನೆ ನಾಶವಾಗಿ ಹೋಗಿದೆ. ಆದರೆ ಇದು ಸುಮಾರು 200 ಕಿ.ಮೀ ವ್ಯಾಪ್ತಿಯ ಬೃಹತ್ ಕುಳಿಯೊಂದನ್ನು ಉಳಿಸಿಹೋಗಿದೆ. ಈ ಕುಳಿಯ ಜ್ಯಾಮಿತಿ ಮತ್ತು ರಚನೆಯ ಬಗ್ಗೆ ಪರಿಶೀಲನೆ ನಡೆಸುವ ಮೂಲಕ ಕಂಪ್ಯೂಟರ್ ಸಿಮ್ಯುಲೇಷನ್(ಕಂಪ್ಯೂಟರ್ ಮೂಲಕ ನಡೆಸುವ ಗಣಿತದ ಮಾಡೆಲಿಂಗ್ ಪ್ರಕ್ರಿಯೆ)ನೊಂದಿಗೆ ಕ್ಷುದ್ರಗ್ರಹ ಪಥಗಳನ್ನು ಪರೀಕ್ಷಿಸಲು ಸಾಧ್ಯವಿದೆ ಮತ್ತು ನಿಜಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಯಾವುದು ಎಂದು ನೋಡಬಹುದು.

ಈ ಕುಳಿಯು ಭೂಮಿಯ ನೂರಾರು ಮೀಟರ್ ಆಳದಲ್ಲಿ ಕೆಸರಿನಡಿ ಹೂತುಹೋಗಿದೆ. ಆದರೆ ಮೆಕ್ಸಿಕೋದಲ್ಲಿರುವ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಈ ಕುಳಿ ಇರುವುದಕ್ಕೆ ಸಾಕಷ್ಟು ಪುರಾವೆಗಳು ಭೂವಿಜ್ಞಾನಿಗಳಿಗೆ ಲಭಿಸಿವೆ ಮತ್ತು ಇದಕ್ಕೆ ಸ್ಥಳೀಯ ಹಳ್ಳಿಯಾದ ಚಿಕ್ಸುಲಬ್ನ ಹೆಸರಿಡಲಾಗಿದೆ. ಈ ಕುಳಿಯ ವೈಶಿಷ್ಟ್ಯವನ್ನು ಪರಿಶೀಲಿಸಲು ಅನುವು ಮಾಡಿಕೊಡುವ ಹಲವು ಮಾಹಿತಿಗಳನ್ನು ಸಂಶೋಧಕರು ಸಂಗ್ರಹಿಸಿದ್ದಾರೆ.

ದೊಡ್ಡ ಪ್ರಭಾವ ಬೀರುವ ಘಟನೆಗಳ ಸಮಯದಲ್ಲಿ ಪೀಕ್ ಉಂಗುರಗಳು (ಸಂಕೀರ್ಣ ಕುಳಿ) ರೂಪುಗೊಳ್ಳುತ್ತವೆ. ಚಿಕ್ಸುಲಬ್ ಕುಳಿಯು ಸುಮಾರು 80 ಕಿಮೀ ವ್ಯಾಸದ ಆಂತರಿಕ ಬೆಟ್ಟಗಳ ವೃತ್ತವನ್ನು ಒಳಗೊಂಡಿದ್ದು ಈ ಮೂಲಕ ಕುಳಿಯೊಳಗೇ 2ನೇ ವೃತ್ತವನ್ನು ರೂಪಿಸಿದೆ. ನಮ್ಮ ಸೌರವ್ಯೆಹದ ಇತರ ಕಲ್ಲಿನಂತಹ ರಚನೆಗಳಲ್ಲಿ ಪೀಕ್ ರಿಂಗ್ಗಳನ್ನು ಸುಲಭವಾಗಿ ಗಮನಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಂತರಾಷ್ಟ್ರೀಯ ಸಾಗರ ಅನ್ವೇಷಣಾ ಕಾರ್ಯಕ್ರಮ ಮತ್ತು ಅಂತರಾಷ್ಟ್ರೀಯ ಭೂಖಂಡ ವೈಜ್ಞಾನಿಕ ಶೋಧ ಕಾರ್ಯಕ್ರಮದಡಿ ಈ ಜಂಟಿ ಅಧ್ಯಯನವನ್ನು ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News