×
Ad

ರಾಜ್ಯ ಮಟ್ಟದ ಮುಕ್ತ ಸ್ಕೇಟಿಂಗ್ ಚಾಂಪಿಯನ್ ಶಿಪ್: ಶಾಮೀಲ್ ಅರ್ಷದ್ ರಿಗೆ 3 ಪದಕ

Update: 2022-08-24 10:10 IST

ಮಂಗಳೂರು, ಆ.24: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆ.19ರಿಂದ 21ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ 14-17 ವರ್ಷದ ಬಾಲಕರ ಇನ್ ಲೆನ್  ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಹೈ-ಫ್ಲೈಯರ್ಸ್(ಆರ್) ಸ್ಕೇಟಿಂಗ್ ಕ್ಲಬ್ ನ ಸ್ಕೇಟರ್ ಮುಹಮ್ಮದ್ ಶಾಮೀಲ್ ಅರ್ಷದ್ 1,000 ಮೀಟರ್ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ, 100 ಮೀಟರ್ ರೋಡ್ ರೇಸ್ ನಲ್ಲಿ ಬೆಳ್ಳಿಯ ಪದಕ ಹಾಗೂ 200 ಮೀಟರ್ ಡ್ಯುಯೆಲ್ ಟಿ.ಟಿ. ರೇಸ್ ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

 ಯೆನೆಪೊಯ ಶಾಲೆಯ ವಿದ್ಯಾರ್ಥಿಯಾಗಿರುವ ಶಾಮೀಲ್ ಅರ್ಷದ್ ಅವರು ಮೋಹನ ದಾಸ್ ಹಾಗೂ ಜಯರಾಜ್ ಮಾರ್ಗದರ್ಶನದಲ್ಲಿ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅರ್ಷದ್ ಹುಸೈನ್ ಹಾಗೂ ರಂಲತ್ ಅರ್ಷದ್ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News