×
Ad

ತೆರಿಗೆ, ದಂಡ ವಸೂಲಿ ಮಾಡುವ ಸರ್ಕಾರ ರಸ್ತೆ ಗುಂಡಿ ಮುಚ್ಚದೆ ಏನು ಮಾಡುತ್ತಿದೆ?: BBMP ವಿರುದ್ಧ ನೆಟ್ಟಿಗರ ಆಕ್ರೋಶ

Update: 2022-08-25 14:38 IST

ಬೆಂಗಳೂರು: ರಸ್ತೆ ಗುಂಡಿಗಳಿಗೆ (pothole)ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದ್ದರೂ ಬಿಬಿಎಂಪಿ (BBMP) ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಇತ್ತೀಚೆಗೆ ಅಂದರೆ,  ಆ. 18ರಂದು  ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಪ್ರೀತ್  ಎಂಬವರು ತಮ್ಮ ಬೈಕಿನಲ್ಲಿ ಸುಂಕದಕಟ್ಟೆಯಿಂದ ಹೇರೋಹಳ್ಳಿ ಕಡೆಗೆ ಹೋಗುತ್ತಿದ್ದ ವೇಳೆ ರಾಮ್‍ರಾಜ್ ಗ್ರಾನೈಟ್ ಮುಂಭಾಗದ ರಸ್ತೆ ಮಧ್ಯದಲ್ಲಿದ್ದ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಲ್ಲೇಶ್ವರಂನಲ್ಲಿರುವ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದರೂ ಅವರು ಅಂದಿನಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಪ್ರೀತ್ ಆ.22ರಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. 

ಇನ್ನು ಈ ಪ್ರಕರಣದ ಬಳಿಕ ಸಮಾಜಿಕ ಜಾಲತಾಣಗಳಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

'ಬೆಂಗಳೂರಿನ ಸುಂಕದಕಟ್ಟೆ ಬಳಿ ಇರುವ ಗುಂಡಿಯಿಂದಾಗಿ ಬೈಕ್ ಸವಾರ ಸುಪ್ರೀತ್ ತನ್ನ ನಿಯಂತ್ರಣ ಕಳೆದುಕೊಂಡಿರುವುಸು ಸಿಸಿಟಿವಿ ಸ್ಪಷ್ಟವಾಗಿ ತೋರಿಸುತ್ತದೆ. ಆದರೆ,  ಪೊಲೀಸರು ಎಫ್‌ಐಆರ್‌ನಲ್ಲಿ  ಈ ನಿರ್ಲಕ್ಷ್ಯವನ್ನು ಸವಾರನ ಮೇಲೆ ಹೊರಿಸಿದ್ದಾರೆ. ಹೀಗಾದರೆ ಹೊಣೆಗಾರಿಕೆ ಎಲ್ಲಿದೆ?' ಎಂದು ದೀಪಕ್ ಬೋಪಣ್ಣ ಎಂಬವರು ಟ್ವಿಟ್ ಮಾಡಿದ್ದಾರೆ. 

'ರಸ್ತೆ ಗುಂಡಿಗೆ ಬಿದ್ದು ಮರಣ ಹೊಂದುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ವಾಹನ ಸವಾರರಿಂದ ಎಲ್ಲಾ ಬಗೆಯ ಟಾಕ್ಸ್, ದಂಡಗಳನ್ನು ವಸೂಲಿ ಮಾಡುವ ಸರ್ಕಾರ ಗುಂಡಿ ಮುಚ್ಚದೆ ಏನು ಮಾಡುತ್ತಿದೆ ? ಸಾರ್ವಜನಿಕರ ಆಕ್ರೋಶ ಎಲ್ಲೆ ಮೀರುವ ಮೊದಲು ಸರ್ಕಾರ ಮತ್ತು ಬಿಬಿಎಂಪಿ ರಸ್ತೆ ಸರಿ ಮಾಡಿಸಬೇಕು ಎಂದು ಮನವಿ ಮಾಡುತ್ತೇನೆ' ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಟ್ವೀಟಿಸಿದ್ದಾರೆ. 

ಇದನ್ನೂ ಓದಿ:  ರಸ್ತೆ ಗುಂಡಿ ಮುಚ್ಚಲು ವಿಫಲ; ಬಿಬಿಎಂಪಿ ಮುಖ್ಯ ಆಯುಕ್ತರು, ಮುಖ್ಯ ಎಂಜಿನಿಯರ್ ಹೈಕೋರ್ಟ್ ಗೆ ಹಾಜರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News