ಆ.28: ಗುರುತು ಚೀಟಿಗೆ ಆಧಾರ್ ಲಿಂಕ್ ಶಿಬಿರ
Update: 2022-08-26 21:58 IST
ಮಂಗಳೂರು, ಆ.26: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಾರ್ಡ್‌ಗಳ ಪರಿಸರದಲ್ಲಿರುವ ಮತದಾರರ ಸೇರ್ಪಡೆ, ಮತದಾರರ ಗುರುತು ಚೀಟಿಗೆ ಆಧಾರ್ ಲಿಂಕ್ ಮಾಡುವ ಕಾರ್ಯಕ್ರಮವು ಆ.28ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ನಗರದ ಬಿಜೈಯ ಸಂತ ಫ್ರಾನ್ಸಿಸ್ ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.