ಬೆಂಗರೆಯಲ್ಲಿ ʼಯೂತ್ ಜೋಡೋ ಬೂತ್ ಜೋಡೋʼ ಕಾರ್ಯಕ್ರಮ
Update: 2022-08-26 23:36 IST
ಮಂಗಳೂರು, ಆ. 26: ಯುವ ಕಾಂಗ್ರೆಸ್ ಸಮಿತಿಯ ʼಯೂತ್ ಜೋಡೋ ಬೂತ್ ಜೋಡೋʼ ಕಾರ್ಯಕ್ರಮವನ್ನು ಕಸಬ ಬೆಂಗರೆ ವಾರ್ಡ್ ನಲ್ಲಿ ಇಂದು ಸಂಜೆ 6 ಗಂಟೆಗೆ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ, ರಾಜ್ಯ ವಿಪಕ್ಷ ಉಪನಾಯಕರಾದ ಯು.ಟಿ ಖಾದರ್, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್ ಲೋಬೊ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಕೆ ಸುಧೀರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮಾನಂದ ಪೂಜಾರಿ, ಕೆಪಿವೈಸಿ ಕಾರ್ಯದರ್ಶಿ ನಾಸಿರ್ ಸಾಮಾನಿಗೆ, ಯುವ ಮುಖಂಡರಾದ ಚೇತನ್ ಬೆಂಗರೆ, ವಾರ್ಡ್ ಅಧ್ಯಕ್ಷರಾದ ಅಶ್ರಫ್ ಬೆಂಗರೆ, ಆಸಿಫ್ ಬೆಂಗರೆ, ಸೌಹಾನ್ ಎಸ್.ಕೆ, ವಾರ್ಡಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಫ್ವಾನ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.