ಬಸ್ ಘಟಕದ ವ್ಯವಸ್ಥಾಪಕನ ಕಿರುಕುಳ ಆರೋಪ: ಡಿಪೋ ಆವರಣದಲ್ಲೇ BMTC ಚಾಲಕ ಆತ್ಮಹತ್ಯೆ

Update: 2022-08-30 11:21 GMT
ಸಾಂದರ್ಭೀಕ ಚಿತ್ರ

ಬೆಂಗಳೂರು, ಆ.30: ಬಿಎಂಟಿಸಿ  (BMTC) ಚಾಲಕನೊಬ್ಬ ಬಸ್ ಡಿಪೋ ಆವರಣದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿ ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜರಾಜೇಶ್ವರಿ ನಗರದ ಡಿಪೋ 21 ರಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಂಟಿಸಿ ಚಾಲಕ ಹೊಳೆಬಸಪ್ಪ (49) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ನಿನ್ನೆ ಬೆಳಗ್ಗೆ ಕರ್ತವ್ಯ ನಿರ್ವಹಿಸಲು ಡಿಪೋಗೆ ಹೋಗಿದ್ದಾರೆ. ಆದರೆ, ಕರ್ತವ್ಯಕ್ಕೆ ಹಾಜರಾಗದೇ, ಡಿಪೋ ಆವರಣದಲ್ಲಿರುವ ಡೀಸೆಲ್ ಬಂಕ್ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಾಹ್ನ 12.20ರ ಸುಮಾರಿಗೆ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ರಜಾ ಮತ್ತು ನಾನಾ ಕಾರಣಗಳಿಂದ ಬಸ್ ಘಟಕದ ವ್ಯವಸ್ಥಾಪಕ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಡೆತ್‍ನೋಟ್‍ನಲ್ಲಿ ಅವರು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ>>> ಬೆಂಗಳೂರು- ಮೈಸೂರು ಹೆದ್ದಾರಿಯ ಪ್ಲ್ಯಾನಿಂಗ್ ಮಾಡಿದವರಿಗೆ ಪ್ರಶಸ್ತಿ ಕೊಡಿಸಬೇಕು: ಡಿಕೆಶಿ ಆಕ್ರೋಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News