×
Ad

ಎಸ್.ಎಂ.ಆರ್. ಶಿಕ್ಷಣ ಸಂಸ್ಥೆ ವತಿಯಿಂದ ಡಾ.ಎಸ್.ಎಂ. ರಶೀದ್ ಹಾಜಿಗೆ ಸನ್ಮಾನ

Update: 2022-08-31 12:09 IST

ಬಂಟ್ವಾಳ : ಯೂನಿವರ್ಸಿಟಿ ಆಫ್ ಸೆಂಟ್ರಲ್ ಅಮೆರಿಕ ವತಿಯಿಂದ ಗೌರವ ಡಾಕ್ಟರೇಟ್  ಪುರಸ್ಕೃತ  ಮಂಗಳೂರಿನ ಎಸ್.ಎಂ.ಆರ್. ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ರಶೀದ್ ಹಾಜಿಯವರನ್ನು ಮೆಲ್ಕಾರ್ - ಮಾರ್ನಬೈಲ್ ನ ಎಸ್.ಎಂ.ಆರ್. ಶಿಕ್ಷಣ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.

ಎಸ್.ಎಮ್.ಆರ್. ಸ್ಕೂಲ್ ನಲ್ಲಿ  ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ  ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ  ಸಬೀನಾ  ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ ಕುಮಾರ್,   ಗಣೇಶ್ ಮಾರ್ನಬೈಲ್ , ಚಂದ್ರಕಲಾ,  ಶ್ರೀನಿವಾಸ್ ನಾಯ್ಕ್, ಸಜಿಪ ಮುನ್ನೂರು ಸಮೂಹ ಸಂಪನ್ಮೂಲ ಕೇಂದ್ರದ  ರವಿಕುಮಾರ್, ಮೆಲ್ಕಾರ್ ಮಹಿಳಾ ಕಾಲೇಜ್ ಪ್ರಾಂಶುಪಾಲರು ಬಿ.ಕೆ. ಅಬ್ದುಲ್ ಲತೀಫ್,   ಮಂಚಿ ವಲಯ ಶಿಕ್ಷಣ ಸಂಯೋಜಕಿ ಪ್ರತಿಮಾ ವೈ.ವಿ, ಬಂಟ್ವಾಳ ಸರಕಾರಿ ನೌಕರರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಫ್ರಾನ್ಸಿಸ್ ಡೆಸಾ, ಎಸ್.ಎಮ್ ಆರ್ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕಿ ಫಾತಿಮತುಲ್ ಝಹೀರ  ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News