ಕ್ರೈಸ್ತ ಮಿಷನರಿಗಳ ಸೇವೆ ಅನನ್ಯ: ಡಾ. ವೀರೇಂದ್ರ ಹೆಗ್ಡೆ

Update: 2022-08-31 17:21 GMT

ಧರ್ಮಸ್ಥಳ, ಆ.31: ಶೈಕ್ಷಣಿಕ ಕ್ರಾಂತಿ, ಕನ್ನಡದ ಬಗ್ಗೆ ಜನಾಂದೋಲನ ಹಾಗೂ ತಾಂತ್ರಿಕ ವರ್ಗದಲ್ಲಿ ಅದ್ವಿತೀಯ ಕಾರ್ಯಕ್ರಮಗಳ ಮೂಲಕ ಕರಾವಳಿ ಪ್ರದೇಶದಲ್ಲಿ ಕ್ರೈಸ್ತ ಮಿಷನರಿಗಳು ಮಾಡಿದ ಸೇವೆಗಳು ಇಂದಿಗೂ ಅವಿಸ್ಮರಣೀಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಡೆ ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡ ಡಾ. ವೀರೇಂದ್ರ ಹೆಗ್ಡೆ ಅವರನ್ನು ಕರಾವಳಿಯ ಪ್ರೊಟೆಸ್ಟೆಂಟ್ ಕ್ರೈಸ್ತರ ಪರವಾಗಿ ಇತ್ತೀಚೆಗೆ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ  ಪ್ರಾಂಶುಪಾಲು ಹಾಗೂ ಕಾಸಸ್ ಸಂಸ್ಥೆಯ ಕಾರ್ಯದರ್ಶಿಯಾದ ರೆ.ಡಾ. ಎಚ್.ಎಂ. ವಾಟ್ಸನ್ ಅವರ ನೇತೃತ್ವದ ನಿಯೋಗ ಧರ್ಮಸ್ಥಳದ ಅವರ ನಿವಾಸದಲ್ಲಿ ಭೇಟಿ ಮಾಡಿ ಅವರನ್ನು ಗೌರವಿಸಿತು.

ಮಾಜಿ ಸಚಿವರಾದ ಕೆ ಅಭಯ್ ಚಂದ್ರ ಜೈನ್, ಸಭಾ ಪಾಲಕರುಗಳಾದ ರೆ.ಡಾ. ಅನಿಲ್ ಕುಮಾರ್, ರೆ.ಡಾ. ಕ್ರೀಸ್ಟೋಫರ್ ಜಾರ್ಜ್, ಹಳೆಯಂಗಡಿಯ ಎಚ್. ವಸಂತ್ ಬರ್ನಾಡ್ ಈ ಸಂದರ್ಭ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News