×
Ad

ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಅಧ್ಯಕ್ಷರಾಗಿ ರೋಬರ್ಟ್ ಆಯ್ಕೆ

Update: 2022-09-02 17:48 IST
ರೋಬರ್ಟ್

ಉಡುಪಿ: ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣ ದಲ್ಲಿ ನಡೆಯಿತು.

ಸಭೆಯಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆಯಲ್ಲಿ 2022-24ನೆ ಸಾಲಿಗೆ ಅಧ್ಯಕ್ಷರಾಗಿ ಪಳ್ಳಿ ರೋಬರ್ಟ್ ಮಿನೇಜಸ್ ಆಯ್ಕೆಯಾದರು.  ಕಾರ್ಯದರ್ಶಿ ಯಾಗಿ ವಿ.ಕಾಸಿಂ ಬಾರ್ಕೂರ್, ಖಜಾಂಚಿಯಾಗಿ ಸೆವ್ರಿನ್ ಡೇಸಾ, ಉಪಾಧ್ಯಕ್ಷ ರಾಗಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಸಹಕಾರ್ಯದರ್ಶಿಯಾಗಿ ವಿ.ಎಸ್. ಉಮರ್, ಸಲಹೆಗಾರರಾಗಿ ಸ್ಥಳೀಯ ಧರ್ಮಗುರು ಫಾ.ಚಾರ್ಲ್ಸ್ ಮಿನೇಜಸ್, ಬೈಕಾಡಿ ಹುಸೈನ್, ಅಲ್ಫೊನ್ಸ್ ಡಿಕೊಸ್ಟಾ, ಮಲ್ಪೆ ರಶೀದ್, ಜೆರಾಲ್ಡ್ ಪಿಂಟೊ ಹಾಗೂ ನಿಕಟಪೂರ್ವ ಅಧ್ಯಕ್ಷರಾಗಿ ಎಂ.ಎಸ್.ಖಾನ್  ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News