×
Ad

ಸಿಪಿಐನಿಂದ 24ನೇ ಉಡುಪಿ ತಾಲೂಕು ಸಮ್ಮೇಳನ

Update: 2022-09-02 19:23 IST

ಉಡುಪಿ : ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) 24ನೇ ಉಡುಪಿ ತಾಲೂಕು ಸಮ್ಮೇಳನ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿ ಇರುವ ಕಮ್ಯುನಿಸ್ಟ್ ಪಕ್ಷದ ಕಛೇರಿಯ ಕಾಮ್ರೇಡ್ ಕೆ.ವಿ.ಭಟ್ ವೇದಿಕೆಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಉಡುಪಿ ಜಿಲ್ಲಾ ಮುಖಂಡ  ಸಂಜೀವ ಶೇರಿಗಾರ್ ವಹಿಸಿದ್ದರು.

ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮತ್ತು ಸಹ ಕಾರ್ಯದರ್ಶಿ  ಬಿ.ಶೇಖರ್ ಅವರು ದೇಶದ ಪ್ರಸ್ತುತ ರಾಜಕೀಯ, ಸಾಮಾಜಿಕ ವ್ಯವಸ್ಥೆಯ ಬಗ್ಗೆ ವಿವರಿಸಿ ಈ ಬಗ್ಗೆ ಜನಜಾಗೃತಿಗೊಳಿಸುವ ಬಗ್ಗೆ ಮಾತನಾಡಿದರು.

ಸಮ್ಮೇಳನದಲ್ಲಿ ಪಕ್ಷದ ಹಿರಿಯ ಸದಸ್ಯರಾದ ಕಾಮ್ರೇಡ್ ಸಂಜೀವ ಶೇರಿಗಾರ್, ರಾಜು ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಸಭೆಯ ಪ್ರಾರಂಭದಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ಶಶಿಕಲ ಗಿರೀಶ್ ಸ್ವಾಗತಿಸಿ ಗತವರ್ಷದ ಚಟುವಟಿಕೆಗಳ ವರದಿ ಮತ್ತು ಸಂಘಟನಾ ವರದಿಯನ್ನು ಮಂಡಿಸಿದರು.

ಮುಂದಿನ ಮೂರು ವರ್ಷಗಳ ಅವಧಿಗೆ ಪಕ್ಷದ ನೂತನ ತಾಲೂಕು ಸಮಿತಿಯನ್ನು 9 ಸದಸ್ಯರೊಂದಿಗೆ ರಚಿಸಲಾಯಿತು. ಕಾರ್ಯದರ್ಶಿಯಾಗಿ ಯು.ಶಿವಾನಂದ, ಉಪಕಾರ್ಯದರ್ಶಿಯಾಗಿ ಶಶಿಕಲ ಗಿರೀಶ್, ಕೋಶಾಧಿಕಾರಿ ಯಾಗಿ ಸುಚಿತ್ರರನ್ನು ಆಯ್ಕೆ ಮಾಡಲಾಯಿತು.

ಕೊನೆಯಲ್ಲಿ ಪಕ್ಷದ ತಾಲೂಕುಕಾರ್ಯದರ್ಶಿ ಯು.ಶಿವಾನಂದ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News