ಬಡತನ ನಿರ್ಮೂಲನೆಯಾಗಲು ಕ್ರೈಸ್ತ ಮಿಷನರಿಗಳು ರೂಪಿಸಿದ ಶಿಕ್ಷಣದ ನೀತಿ ಕಾರಣ: ರೆ.ವಿನಯ್ ಲಾಲ್ ಬಂಗೇರ

Update: 2022-09-04 13:23 GMT

ಮುಲ್ಕಿ, ಸೆ. 4: ದೇಶದಲ್ಲಿ ಬಡತನ ನಿರ್ಮೂಲನೆಯಾಗುತ್ತಿದೆ ಎಂದಾದರೆ, ಕ್ರೈಸ್ತ ಮಿಷನರಿಗಳು ಅಂದು ರೂಪಿಸಿದ ಶಿಕ್ಷಣದ ನೀತಿ ಕಾರಣ. ಶಿಕ್ಷಣ ಸಂಸ್ಥೆಗಳು ವ್ಯಾಪಾರದ ಕೇಂದ್ರವಾಗಿರದೇ, ಸೇವಾ ಕೇಂದ್ರವಾಗಿರ ಬೇಕೆಂದು ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚ್ ನ ಸಭಾ ಪಾಲಕರಾದ ರೇ. ವಿನಯ್ ಲಾಲ್ ಬಂಗೇರ ಹೇಳಿದ್ದಾರೆ.

ಹಳೆಯಂಗಡಿ ಸಿಎಸ್ಐ ಚರ್ಚ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕ್ರೈಸ್ತ ಮಿಷನರಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಸಂಘಟಿತ ಸಮಾಜವು ಶಿಕ್ಷಣ ಪಡೆದು ದೇಶ ಅಭಿವೃದ್ಧಿಯಾಗಲು ತನ್ನದೇ ಆದ ಸೇವೆ ನೀಡಿದವರು.  ಅವರು ಕರೆ ನೀಡಿದರು.

ಮುಖ್ಯ ಅತಿಗಳಾಗಿ ಆಗಮಿಸಿದ ಉಡುಪಿ ಸಿಎಸ್ಐ ಜುಬ್ಬಿಲಿ ಸಭೆಯ ಸುದರ್ಶನ್ ಅವರು ದೇವರ ವಾಕ್ಯ ಸಂದೇಶ ನೀಡಿದರು. ಶಿಕ್ಷಕಿ ಪುಷ್ಪಲತಾ ಪಾಲನ್ನ ಮತ್ತು ಶಿಕ್ಷಕಿ ಐರಿನ್ ಕರ್ಕಡ ಅವರು ವಾಕ್ಯವನ್ನು ವಾಚಿಸಿದರು.
ಇದೇ ಸಂದರ್ಭ ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚ್ ನ ಸಭೆಯ ಕಾರ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಶಿಕ್ಷಕಿಯರನ್ನು ಗೌರವಿಸಲಾಯಿತು.

ಸಮಾರಂಭದಲ್ಲಿ ಸಭಾ ಪರಿಪಾಲನ ಸಮಿತಿ ಸದಸ್ಯರಾದ ಎಚ್ . ವಸಂತ ಬರ್ನಾಡ್, ಜೇಮ್ಸ್ ಕರ್ಕಡ, ಸಿಡ್ನಿ ಕರ್ಕಡ ಉಪಸ್ಥರಿದ್ದರು.

ಮಹಿಳಾ ಅನ್ಯೋನ್ಯ ಕೂಟದ ಅಧ್ಯಕ್ಷೆ ಹರಿಣಿ ಬಂಗೇರ ಕಾರ್ಯಕ್ರಮ ರೂಪಿಸಿದರು. ಸಭಾ ಪರಿಪಾಲನ ಸಮಿತಿಯ ಕಾರ್ಯದರ್ಶಿ ಲಾವಣ್ಯ ಕೋಟ್ಯಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News