ಬೆಳ್ಳಾರೆ; ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ

Update: 2022-09-05 16:42 GMT

ಬೆಳ್ಳಾರೆ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮತ್ತು ಸುಳ್ಯ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಡಾ l ಸರ್ವಪಲ್ಲಿ ರಾಧಾಕೃಷ್ಣ ನ್ ರವರ ಜನ್ಮದಿನೋತ್ಸವ ಕಾರ್ಯಕ್ರಮವು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಸೋಮವಾರ ನಡೆಯಿತು.

ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಪನ್ನೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರೂ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ಆಧುನಿಕ ಯುಗದಲ್ಲಿ ಮೊದಲು ನಮ್ಮನ್ನು ನಾವೇ ಗುರುತಿಸುವಂತಹ ಕೆಲಸ ಕಾರ್ಯಗಳು ನಮ್ಮಿಂದಾಗಬೇಕಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದವರನ್ನು ನೆನಪಿಸುವಂತ ಕಾರ್ಯವಾಗಬೇಕಾಗಿದ್ದು, ನಾವು ಹಿರಿಯರ ಮಾರ್ಗದರ್ಶನದಲ್ಲೇ ಮುಂದೆ ಸಾಗಿದರೆ ಯಶಸ್ಸು ಸಾರ್ಥಕ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾದ ಡಾ l ಸಿ ನಾಗಣ್ಣ ಮಾತನಾಡಿ ,ನಮ್ಮಲ್ಲಿರುವ ಅಭಿರುಚಿಯನ್ನು ಬೆಳೆಸುವಂತರಾಗಬೇಕು ,ಸಣ್ಣ ಅಭಿಪ್ರಾಯಗಳು ಏನೇ ಇದ್ದರು ಅದನ್ನು ಬೆಳೆಸಿ ಮುನ್ನೆಡಸಿದರೆ ಉತ್ತಮ ಜೀವನ ಮುನ್ನೆಡೆಯಲು ಸಾಧ್ಯ, ಅದರೊಂದಿಗೆ ಆತ್ಮಸ್ಥೈರ್ಯ ,ಅನುಕಂಪ ,ನಂಬಿಕೆ ಇವೆಲ್ಲವನ್ನು ಸುಶಿಕ್ಷಿತ  ಅನಿಸಿಕೊಳ್ಳುವವರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆ. ನಾವು ಪಡೆದ ಗ್ರೇಡ್ ಮುಖ್ಯ ವಲ್ಲ ನಮ್ಮ ನಡತೆ ಮುಖ್ಯವಾಗಿದೆ. ಡಾ l ಸರ್ವಪಳ್ಳಿ ರಾಧಾಕೃಷ್ಣ ರವರಿಗೆ ಮೇಲರಿಮೆ ,ಕೀಳರಿಮೆ ಎನ್ನುವಂತದ್ದು ಇರಲಿಲ್ಲ ಇವರ ಜೀವನ ಶೈಲಿ ಪ್ರತಿಯೊಬ್ಬ ಶಿಕ್ಷಕರಿಗೆ ಮಾದರಿಯಾಗಬೇಕಾಗಿದೆ ಹಾಗೂ ಇದನ್ನು ಪಾಲಿಸಿ ಮುನ್ನೆಡೆಯಬೇಕಾಗಿದೆ. ಶಿಕ್ಷಣದಲ್ಲಿ ಎಲ್ಲಾ ವರ್ಗದವರಿಗೆ ಸಮಾನ ಅವಕಾಶ ದೊರೆತಾಗ ಮಾತ್ರ ಶಿಕ್ಷಣ ಬೆಳವಣಿಗೆ ಆಗಲು ಸಾಧ್ಯ ಎಂದರು.

ಸನ್ಮಾನ ಕಾರ್ಯಕ್ರಮ : 2021- 22 ರಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಚ್ರಪ್ಪಾಡಿ ಸಹಶಿಕ್ಷಕಿ ಶ್ವೇತಾ ಕೆ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಮುಖ್ಯ ಶಿಕ್ಷಕಿ ಸುನಂದ ಜಿ , ಸರಕಾರಿ ಪ್ರೌಢ ಶಾಲೆ ಮರ್ಕಂಜ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪ ,ಸ್ಕೌಟ್ /ಗೈಡ್ಸ್ ವಿಭಾಗದಲ್ಲಿ ಸಾಧನೆಗೈದ ಶಿಕ್ಷಕಕಾರದ ಸುಳ್ಯ ವಲಯದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ಸ್ಕೌಟ್ ವೃತ್ತಿ ಶಿಕ್ಷಕಿ  ಚಂದ್ರಾವತಿ ಎಂ  , ಪಂಜವಲಯದ ಹಿಮಾಲಯ ವುಡ್ ಬ್ಯಾಡ್ಜ್ ಸ್ಕೌಟ್ ಬಿ.ಆರ್.ಪಿ ಸುಳ್ಯ ,ಸುಬ್ರಹ್ಮಣ್ಯ ಕೆ ಎನ್ , ಶೇಕಡಾ ನೂರು ಫಲಿತಾಂಶ ಬಂದ ಶಾಲಾ ಮುಖ್ಯ ಗುರುಗಳಿಗೆ , ಕಳೆದ ಸಾಲಿನಲ್ಲಿ ನಿವೃತ್ತರಾದ ವರಿಗೆ ,ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಕರ್ನಾಟಕ ಸರಕಾರದ ಅಧ್ಯಕ್ಷ ತೀರ್ಥರಾಮ ಎ. ವಿ , ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ , ಸುಳ್ಯ ತಹಶೀಲ್ದಾರ್ ಎಸ್ ಅನಿತಾ ಲಕ್ಷ್ಮೀ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್ ಮಾತನಾಡಿ ಶುಭಹಾರೈಸಿದರು.

ಸಂಸ್ಥೆಯ ಪ್ರಭಾರ ಪ್ರಾಂಶುಪಾಲ ವಿಶ್ವನಾಥ ಗೌಡ, ಉಪಪ್ರಾಂಶುಪಾಲೆ ಉಮಾಕುಮಾರಿ, ಹುಣಸೂರು ದೀಕ್ಷಾ ಎಜ್ಯುಕೇಶನಲ್ ಟ್ರಸ್ಟ್‌ ಪ್ರಾಂಶುಪಾಲ ಪಾಂಡುರಂಗ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ  ವೀಣಾ ಎಂ.ಟಿ., ಕ್ಷೇತ್ರ ಸಮನ್ವಯಾಧಿಕಾರಿ ಶೀತಲ್, ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ ಕೆರೆಮೂಲೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕೆ.ಎಸ್., ಬೋಧಕೇತರ ನೌಕರರ ಸಂಘದ ಅಧ್ಯಕ್ಷ ಶಿವಪ್ರಸಾದ್ ಹುಳಿಯಡ್ಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ, ಪ್ರಾಂಶುಪಾಲ - ಮುಖ್ಯೋಪಾಧ್ಯಾಯ ರ  ಸಂಘದ ಕಾರ್ಯದರ್ಶಿ ಪ್ರಕಾಶ್ ವೇದಿಕೆಯಲ್ಲಿದ್ದರು.

ಸಭಾ ಕಾರ್ಯಕ್ರಮಕ್ಕಿಂತ ಮೊದಲು ವೇದಿಕೆ ಗಾಯನ ಸ್ಪರ್ದೆ ನಡೆಯಿತು ಹಾಗೂ ಸ್ಪರ್ದೆಗೆ ತೀರ್ಪುಗಾರರಾಗಿ ಸಹಕರಿಸಿದ ಶುಭಾಶ್ ಪಂಜ, ಬಾಲಕೃಷ್ಣ ನೆಟ್ಟಾರು, ರಮೇಶ್ ಮೆಟ್ಟಿನಡ್ಕ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶೀತಲ್ ವಂದಿಸಿದರು. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕಿ ಮಮತಾ ಎಂ ಜೆ ಮೂಡಿತ್ತಾಯ, ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಯನಗರ ಶಿಕ್ಷಕಿ ಮಮತಾ ಕೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News