×
Ad

ಮಸೂದ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನಿಂದ ರಕ್ತದಾನ ಶಿಬಿರ

Update: 2022-09-08 00:13 IST

ಮಂಗಳೂರು, ಸೆ.7: ಮಸೂದ್ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನಿಂದ ರಕ್ತದಾನ ಮತ್ತು ಉಚಿತ ಫಿಸಿಯೋತೆರಪಿ ಶಿಬಿರವು ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಮತ್ತು ಕೆಎಂಸಿ ಬ್ಲಡ್‌ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಲ.ನಾಗೇಶ್ ಕುಮಾರ್ ಎನ್.ಜೆ. ಡಾ. ದೀಪ ಅಡಿಗ ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಗುರುಪ್ರೀತ್ ಆಳ್ವ, ಕಾರ್ಯದರ್ಶಿ ಲ.ಇಂದಿರಾ ಶೆಟ್ಟಿ, ಕೋಶಾಧಿಕಾರಿ ಅರುಣ್ ಪೀಟರ್ ಪಿಂಟೊ, ಮಸೂದ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಡಾ. ಲೀಶಾ ಮತ್ತು ಮಸೂದ್ ನರ್ಸಿಂಗ್ ಕಾಲೇಜಿನ ಉಪಪ್ರಾಂಶುಪಾಲೆ ವಿಜೇತ ಕೊಟ್ಟಾರಿ,  ಕಾಯಯಕ್ರಮ ಅಯೋಜಕರಾದ ದಿವ್ಯಾ ಮತ್ತು ಸುಪ್ರಿತಾ ಕೆ.ಉಪಸ್ಥಿತರಿದ್ದರು.

ಮಸೂದ್ ಫಿಸಿಯೋತೆರಪಿ ಕಾಲೇಜಿನ ಪ್ರಾಂಶುಪಾಲ ಡಾ.ಅನೀಶ್ ಸ್ವಾಗತಿಸಿದರು. ಮಸೂದ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಗ್ರೆಟ್ಟಾ ತೌರೋ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News