ಇಂದು(ಸೆ.9) ಮಂಗಳೂರು ಮನಪಾ ಮೇಯರ್-ಉಪ ಮೇಯರ್ ಚುನಾವಣೆ

Update: 2022-09-09 05:49 GMT

ಮಂಗಳೂರು, ಸೆ.9: ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಚುನಾವಣೆ ಇಂದು(ಸೆ.9) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕದ್ರಿ(ಪದವು)  ವಾರ್ಡ್ ಸದಸ್ಯ ಜಯಾನಂದ ಅಂಚನ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸೆಂಟ್ರಲ್ ಮಾರ್ಕೆಟ್ ವಾರ್ಡ್ ಸದಸ್ಯೆ ಪೂರ್ಣಿಮಾ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಘೋಷಿಸಿದೆ.

ಈ ನಡುವೆ ಕಾಂಗ್ರೆಸ್ ಪಕ್ಷದ ವತಿಯಿಂದ ಮೇಯರ್ ಸ್ಥಾನಕ್ಕೆ ಹಿರಿಯ ಕಾರ್ಪೊರೇಟರ್, ದೇರೇಬೈಲ್(ದಕ್ಷಿಣ) ವಾರ್ಡ್ ಸದಸ್ಯ ಶಶಿಧರ ಹೆಗ್ಡೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ಬಂದರ್ ವಾರ್ಡ್ ಸದಸ್ಯೆ ಝೀನತ್ ಶಂಸುದ್ದೀನ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಮೇಯರ್ ಉಪಮೇಯರ್ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News