ಏಶ್ಯಕಪ್ ಸೂಪರ್-4 ಪಂದ್ಯ: ಶ್ರೀಲಂಕಾ ವಿರುದ್ಧ ಪಾಕಿಸ್ತಾನ 121 ರನ್‌ಗೆ ಆಲೌಟ್

Update: 2022-09-09 15:52 GMT
photo: twitter

ದುಬೈ, ಸೆ.9: ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಡಿಸಿಲ್ವಾ(3-21)ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಏಶ್ಯಕಪ್‌ನ ಕೊನೆಯ ಸೂಪರ್-4 ಪಂದ್ಯದಲ್ಲಿ 19.1 ಓವರ್‌ಗಳಲ್ಲಿ ಕೇವಲ 121 ರನ್‌ಗೆ ಆಲೌಟಾಯಿತು.

ಶುಕ್ರವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕ್ ತಂಡ 14.5 ಓವರ್‌ಗಳಲ್ಲಿ 91 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ನಂತರ ಕಳಪೆ ಆರಂಭದಿಂದ ಚೇತರಿಸಿಕೊಳ್ಳಲು ವಿಫಲವಾಯಿತು.

ಪಾಕ್ ಪರ ನಾಯಕ ಬಾಬರ್ ಆಝಂ(30 ರನ್, 29 ಎಸೆತ, 2 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು. ಮುಹಮ್ಮದ್ ನವಾಝ್(26 ರನ್, 18 ಎಸೆತ, 1 ಬೌಂ., 2 ಸಿ.), ಮುಹಮ್ಮದ್ ರಿಝ್ವನ್(14 ರನ್), ಫಾಖರ್ ಝಮಾನ್(13 ರನ್), ಇಫ್ತಿಕಾರ್ ಅಹ್ಮದ್(13 ರನ್) ಒಂದಷ್ಟು ಪ್ರತಿರೋಧ ಒಡ್ಡಿದರು.

2 ವಿಕೆಟ್ ಪಡೆದ ಮಹೀಶ್ ತೀಕ್ಷಣ(2-21), ತಲಾ ಒಂದು ವಿಕೆಟ್ ಪಡೆದ ಪ್ರಮೋದ್ ಮಧುಶನ್(1-21), ಧನಂಜಯ ಡಿಸಿಲ್ವಾ(1-18) ಹಾಗೂ ಚಮಿಕಾ ಕರುಣರತ್ನೆ(1-4)ಯಶಸ್ವಿ ಬೌಲರ್ ಹಸರಂಗಗೆ ಸಾಥ್ ನೀಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News